ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ: ರೋಹಿತ್-ಕೊಹ್ಲಿ ನಡುವೆ ತಾರತಮ್ಯ ಆರೋಪ

ಮಂಗಳವಾರ, 14 ನವೆಂಬರ್ 2023 (10:15 IST)
Photo Courtesy: Twitter
ಮುಂಬೈ: ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಿದ್ದು, ನಾಯಕ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಎಲ್ಲರಿಗೂ ಮೆಚ್ಚುಗೆಯಿದೆ. ಆದರೆ ವಿಶ್ವಕಪ್ ನ ಅಧಿಕೃತ ನೇರಪ್ರಸಾರಕ ಸಂಸ್ಥೆ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ‍ಟೀಂ ಇಂಡಿಯಾವನ್ನು ವಿಭಜಿಸುತ್ತಿದೆ. ರೋಹಿತ್-ಕೊಹ್ಲಿ ನಡುವೆ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ಟ್ವಿಟರ್ ನಲ್ಲಿ ಶೇಮ್ ಆನ್ ಸ್ಟಾರ್ ಸ್ಪೋರ್ಟ್ಸ್ ಎಂದು ಟ್ಯಾಗ್ ಮಾಡಿ ಟ್ರೆಂಡ್ ಶುರು ಮಾಡಿದ್ದಾರೆ. ಇಷ್ಟಕ್ಕೂ ಆಗಿದ್ದೇನು?

ಸೆಮಿಫೈನಲ್ ಪಂದ್ಯದ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಜಾಹೀರಾತು ಪೋಸ್ಟರ್ ನಲ್ಲಿ ಒಂದೆಡೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಫೋಟೋ ಹಾಕಿದ್ದರೆ ಮತ್ತೊಂದೆಡೆ ರೋಹಿತ್ ಬದಲು ವಿರಾಟ್ ಕೊಹ್ಲಿ ಫೋಟೋ ಹಾಕಿದೆ. ನಾಯಕನ ಸ್ಥಾನದಲ್ಲಿ ರೋಹಿತ್ ಫೋಟೋ ಹಾಕಬೇಕಿತ್ತು. ಆದರೆ ಕೊಹ್ಲಿ ಫೋಟೋ ಹಾಕಿ ರೋಹಿತ್ ಕಡೆಗಣಿಸಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸಕ್ಸಸ್ ಗೆ ಕೊಹ್ಲಿ ಮಾತ್ರವಲ್ಲ, ರೋಹಿತ್ ಕೂಡಾ ನಾಯಕರಾಗಿ, ಆರಂಭಿಕರಾಗಿ ರನ್ ಗಳಿಸಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರನ್ನು ಕನಿಷ್ಠ ನಾಯಕ ಎಂದಾದರೂ ಪರಿಗಣಿಸಿ ಫೋಟೋ ಬಳಸಬಹುದಿತ್ತಲ್ಲವೇ?  ರೋಹಿತ್ ರನ್ನು ಕಡೆಗಣಿಸಿ ಕೊಹ್ಲಿಯನ್ನು ಮಾತ್ರ ಅಟ್ಟಕ್ಕೇರಿಸುತ್ತಿರುವುದು ಯಾಕೆ? ಈಗ ಟೀಂ ಇಂಡಿಯಾ ನಾಯಕ ಕೊಹ್ಲಿ ಅಲ್ಲ, ರೋಹಿತ್ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ