ಏಕದಿನ ವಿಶ್ವಕಪ್: ಸೆಮಿಫೈನಲ್ ಮಳೆಗಾಹುತಿಯಾದರೂ ಟೀಂ ಇಂಡಿಯಾಗಿಲ್ಲ ಚಿಂತೆ!
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿದೆ. ಒಂದು ವೇಳೆ ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿ ಪಂದ್ಯ ನಡೆಯದೇ ಹೋದರೆ ಭಾರತಕ್ಕೆ ಅನುಕೂಲವಾಗಲಿದೆ. ನೆಟ್ ರನ್ ರೇಟ್ ಆಧಾರದಲ್ಲಿ ಭಾರತ ನೇರವಾಗಿ ಫೈನಲ್ ಗೆ ಅರ್ಹತೆ ಪಡೆಯಲಿದೆ.
ಇನ್ನೊಂದು ಸೆಮಿಫೈನಲ್ ನಲ್ಲಿ ದ.ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲೂ ಒಂದು ವೇಳೆ ವರುಣ ಅಡ್ಡಿಯಾದರೆ ನೆಟ್ ರನ್ ರೇಟ್ ನಲ್ಲಿ ಮುಂದಿರುವ ಆಫ್ರಿಕಾ ಫೈನಲ್ ತಲುಪಲಿದೆ. ಒಂದು ವೇಳೆ ಕನಿಷ್ಠ ಓವರ್ ಗಳ ಪಂದ್ಯ ನಡೆಸಲು ಅವಕಾಶವಿದ್ದರೂ ಸೆಮಿಫೈನಲ್ ಪಂದ್ಯ ನಡೆಯಲಿದೆ.