ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷಗಿರಿಗೆ ಪವಾರ್ ರಾಜೀನಾಮೆ ನಿರೀಕ್ಷೆ

ಸೋಮವಾರ, 25 ಜುಲೈ 2016 (13:21 IST)
ಕ್ರಿಕೆಟ್ ಆಡಳಿತಗಾರರಿಗೆ 70 ವರ್ಷದ ವಯೋಮಿತಿಯನ್ನು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದ ಬಳಿಕ ಶರದ್ ಪವಾರ್ ಅವರು ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷಗಿರಿಯಿಂದ ಕೆಳಕ್ಕಿಳಿಯಲಿದ್ದಾರೆ.
 
ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ 76 ವರ್ಷದ ಪವಾರ್, ತಾವು ಸುಪ್ರೀಂಕೋರ್ಟ್ ತೀರ್ಪಿಗೆ ತಲೆಬಾಗುವುದಾಗಿ ತಿಳಿಸಿದರು. ಆದಾಗ್ಯೂ, ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಕ್ಕೆ ತರಲು ಎಂಸಿಎ ಆರು ತಿಂಗಳು ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ತಾವು ತಕ್ಷಣವೇ ನಿವೃತ್ತಿಯಾಗುವುದಿಲ್ಲ ಎಂದೂ ಪವಾರ್ ಹೇಳಿದರು.
 
 ಮುಂಬೈ ಕ್ರಿಕೆಟ್ ಸಂಸ್ಥೆಯು ಸುಪ್ರೀಂಕೋರ್ಟ್‌ನ ಎಲ್ಲಾ ಶಿಫಾರಸುಗಳಿಗೆ ಒಪ್ಪಿಗೆ ಸೂಚಿಸಿದೆ. ಆದರೆ ಒಂದೆರಡು ಅಂಶಗಳ ಬಗ್ಗೆ ನಮಗೆ ಸ್ಪಷ್ಟೀಕರಣ ಬೇಕಾಗಿದೆ. ಮಹಾರಾಷ್ಟ್ರದಲ್ಲಿ ನಾವು ಮೂರು ಕ್ರಿಕೆಟ್ ಸಂಸ್ಥೆಗಳನ್ನು ಹೊಂದಿದ್ದು, ಆವರ್ತ ನೀತಿಗೆ ನಮ್ಮ ವಿರೋಧವಿದೆ ಎಂದರು.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ