ಕೋಚ್ ರೇಸ್‌ನಲ್ಲಿ ಶಾಸ್ತ್ರಿ, ಸಂದೀಪ್ ಪಾಟಿಲ್ ಮುನ್ನಡೆ, ಕುಂಬ್ಳೆ ಡ್ರಾಪ್ ಸಾಧ್ಯತೆ

ಗುರುವಾರ, 16 ಜೂನ್ 2016 (19:52 IST)
ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ 57 ಅರ್ಜಿಗಳ ಪೈಕಿ 21 ಅರ್ಜಿಗಳನ್ನು ಆಯ್ಕೆಮಾಡಿದ್ದು, ತೆಂಡೂಲ್ಕರ್, ಗಂಗೂಲಿ ಮತ್ತು ಲಕ್ಷ್ಮಣ್ ಸಲಹಾ ಸಮಿತಿಗೆ ಅಂತಿಮ ಆಯ್ಕೆಯನ್ನು ಬಿಟ್ಟಿದೆ. 
 
ಸಮಿತಿಯ ಅಂತಿಮ ಆಯ್ಕೆ ಸಂದೀಪ್ ಪಾಟೀಲ್ ಅಥವಾ ರವಿ ಶಾಸ್ತ್ರಿ ನಡುವೆ ಎಂದು ಹೇಳಲಾಗುತ್ತಿದೆ. ಕುಂಬ್ಳೆ ಕ್ರಿಕೆಟರ್ ಆಗಿ ಮಹಾನ್ ಸಾಧನೆ ಮಾಡಿದ್ದಾರೆ. ಆದರೆ ಅವರು ಐಪಿಎಲ್‌ನಲ್ಲಿ ಮಾತ್ರ ಮಾರ್ಗದರ್ಶಿಯಾಗಿದ್ದರು. ಮೊದಲಿಗೆ ರಾಯಲ್ ಚಾಲೆಂಜರ್ಸ್ ಮತ್ತು ನಂತರ ಮುಂಬೈ ಇಂಡಿಯನ್ಸ್‌ಗೆ ಮೆಂಟರ್ ಆಗಿದ್ದರು.  ಪೋಸ್ಟ್‌ಗೆ ಪಟ್ಟಿ ಮಾಡಲಾದ ಷರತ್ತುಗಳ ಪೈಕಿ ಬಿಸಿಸಿಐನ ಮೊದಲ ಷರತ್ತನ್ನು ಕುಂಬ್ಳೆ ಪೂರೈಸಿಲ್ಲವೆಂದು ಹೇಳಲಾಗುತ್ತಿದೆ.

ಈ ಷರತ್ತಿನಲ್ಲಿ ಅಭ್ಯರ್ಥಿ ಐಸಿಸಿಯ ಯಾವುದೇ ಸದಸ್ಯ ರಾಷ್ಟ್ರದ ತಂಡಕ್ಕೆ ಮೊದಲ ದರ್ಜೆ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋಚ್ ಮಾಡಿರಬೇಕೆಂದು ತಿಳಿಸಲಾಗಿದೆ.
 
ಆದರೆ ಶಾಸ್ತ್ರಿ ಕೊಹ್ಲಿ ಮತ್ತು ಧೋನಿಯ ಬೆಂಬಲ ಹೊಂದಿದ್ದರೆ, ಪಾಟಿಲ್ 2012ರಿಂದ ಭಾರತ ರಾಷ್ಟ್ರೀಯ ತಂಡದಲ್ಲಿ ಮುಖ್ಯ ಆಯ್ಕೆದಾರರಾಗಿ ಅನುಭವ ಹೊಂದಿದ್ದಾರೆ. ಕೀನ್ಯ ರಾಷ್ಟ್ರೀಯ ತಂಡಕ್ಕೆ ಕೂಡ ಅವರು ಕೋಚ್ ಆಗಿದ್ದ ಅವಧಿಯಲ್ಲಿ ಕೀನ್ಯಾ 1996ರ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶ ಮಾಡಿತ್ತು. ಐಪಿಎಲ್ ಮೊದಲ ದರ್ಜೆಯ ಕ್ರಿಕೆಟ್‌ನಲ್ಲಿ ಅರ್ಹತೆ ಪಡೆದಿಲ್ಲವಾದ್ದರಿಂದ ಕೋಚ್ ಹುದ್ದೆಗೆ ಕುಂಬ್ಳೆ ಅವರನ್ನು ಡ್ರಾಪ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ