ಜಾವಗಲ್ ಶ್ರೀನಾಥ್ ನೆನೆಸಿಕೊಂಡ ಆಫ್ರಿಕಾ ದಿಗ್ಗಜ ಶಾನ್ ಪೊಲ್ಲಾಕ್

ಶನಿವಾರ, 18 ಏಪ್ರಿಲ್ 2020 (09:56 IST)
ಮುಂಬೈ: ಕನ್ನಡಿಗ ವೇಗಿ ಜಾವಗಲ್ ಶ್ರೀನಾಥ್ ಗೆ ಸಿಗಬೇಕಾಗಿದ್ದ ಗೌರವ ಸಿಕ್ಕಿರಲಿಲ್ಲ ಎಂದು ದ.ಆಫ್ರಿಕಾ ಮಾಜಿ ವೇಗಿ ಶಾನ್ ಪೊಲ್ಲಾಕ್ ಅಭಿಪ್ರಾಯಪಟ್ಟಿದ್ದಾರೆ.


ಸಂದರ್ಶನವೊಂದರಲ್ಲಿ ವಿಶ್ವದ ಪ್ರಮುಖ ವೇಗಿಗಳನ್ನು ಹೆಸರಿಸಿರುವ ಪೊಲ್ಲಾಕ್ ಭಾರತೀಯ ವೇಗಿಗಳ ಪೈಕಿ ಏಕೈಕ ವ್ಯಕ್ತಿಯಾಗಿ ಶ್ರೀನಾಥ್ ರನ್ನು ಆಯ್ಕೆ ಮಾಡಿದ್ದಾರೆ.

‘ಜಾವಗಲ್ ಶ್ರೀನಾಥ್ ನನ್ನ ಸಮಕಾಲೀನ ಬೌಲರ್ ಗಳ ಪೈಕಿ ಅತ್ಯುತ್ತಮ ಬೌಲರ್ ಆಗಿದ್ದರು. ಆದರೆ ವಿಪರ್ಯಾಸವೆಂದರೆ ಅವರಿಗೆ ಸಿಗಬೇಕಾಗಿದ್ದ ಮನ್ನಣೆ ಸಿಕ್ಕಿರಲಿಲ್ಲ’ ಎಂದು ಪೊಲ್ಲಾಕ್ ಕನ್ನಡಿಗನ ಗುಣಗಾನ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ