ಐಪಿಎಲ್ 2022: ಕಿಂಗ್ಸ್ ಪಂಜಾಬ್ ಗೆ ಶಿಖರ್ ಧವನ್ ಕ್ಯಾಪ್ಟನ್

ಶನಿವಾರ, 19 ಫೆಬ್ರವರಿ 2022 (09:10 IST)
ಮುಂಬೈ: ಮುಂಬರುವ ಐಪಿಎಲ್ ನಲ್ಲಿ ಕಿಂಗ್ಸ್ ಪಂಜಾಬ್ ತಂಡವನ್ನು ಶಿಖರ್ ಧವನ್ ನಾಯಕನಾಗಿ ಮುನ್ನಡೆಸಲಿದ್ದಾರೆ.

ಇದುವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಆರಂಭಿಕರಾಗಿದ್ದ ಧವನ್ ಈ ಬಾರಿಯ ಹರಾಜಿನಲ್ಲಿ ಪಂಜಾಬ್ ತಂಡಕ್ಕೆ 8.25 ಕೋಟಿ ರೂ.ಗೆ ಬಿಕರಿಯಾಗಿದ್ದರು. ಈ ತಂಡದಲ್ಲಿ ಈಗಾಗಲೇ ಮಯಾಂಕ್ ಅಗರ್ವಾಲ್ ಉಳಿದುಕೊಂಡಿದ್ದಾರೆ.

ಹಾಗಿದ್ದರೂ ಮಯಾಂಕ್ ಗೆ ನಾಯಕತ್ವದ ಅನುಭವವಿಲ್ಲ. ಹೀಗಾಗಿ ಧವನ್ ನಾಯಕತ್ವಕ್ಕೆ ಸೂಕ್ತ ಎಂದು ಕೋಚ್ ಅನಿಲ್ ಕುಂಬ್ಳೆ ಸಲಹೆ ನೀಡಿದ್ದಾರೆ. ಈ ಕಾರಣಕ್ಕೆ ಧವನ್ ಪಂಜಾಬ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ಹೈದರಾಬಾದ್ ಮತ್ತು ಬೆಂಗಳೂರು ತಂಡಕ್ಕೆ ಹೊಸ ನಾಯಕನ ನೇಮಕ ಬಾಕಿಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ