ಈ ಮೂವರಲ್ಲಿ ಆರ್ ಸಿಬಿ ನಾಯಕ ಯಾರು?
ವಿರಾಟ್ ಕೊಹ್ಲಿ ಬಳಿಕ ತೆರವಾಗಿರುವ ಸ್ಥಾನಕ್ಕೆ ನಾಯಕನಾಗಬಲ್ಲ ಒಬ್ಬ ಆಟಗಾರನನ್ನು ಆರ್ ಸಿಬಿ ಖರೀದಿಸಬಹುದು ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಅದು ಸುಳ್ಳಾಗಿದೆ.
ಹಾಗಿದ್ದರೂ ಕೋಚ್ ಮೈಕ್ ಹಸನ್ ಸದ್ಯಕ್ಕೆ ನಮಗೆ ಮೂವರು ನಾಯಕರು ಸಿಕ್ಕಿದ್ದಾರೆ ಎಂದಿದ್ದಾರೆ. ಫಾ ಡು ಪ್ಲೆಸಿಸ್, ವಿರಾಟ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್. ಈ ಪೈಕಿ ಕೊಹ್ಲಿ ಮತ್ತೆ ನಾಯಕರಾಗುವುದು ಅನುಮಾನ. ಹಾಗಿದ್ದ ಸಂದರ್ಭದಲ್ಲಿ ಪ್ಲೆಸಿಸ್ ಅಥವಾ ಮ್ಯಾಕ್ಸ್ ವೆಲ್ ನಡುವೆ ಪೈಪೋಟಿ ನಡೆಯಲಿದೆ. ಈ ಪೈಕಿ ಗ್ಲೆನ್ ಮ್ಯಾಕ್ಸ್ ವೆಲ್ ಈಗಾಗಲೇ ಆರ್ ಸಿಬಿ ಪರ ಆಡಿ ಅನುಭವವಿರುವವರು. ಹಾಗಾಗಿ ಅವರು ಫ್ರಂಟ್ ರನ್ನರ್ ಆಗಬಹುದು. ಏನೇ ಆದರೂ ಕೊಹ್ಲಿ ಹೊರತುಪಡಿಸಿದರೆ ಆರ್ ಸಿಬಿಗೆ ವಿದೇಶೀ ಆಟಗಾರ ನಾಯಕನಾಗಿ ಬರುವ ಸಾಧ್ಯತೆ ಹೆಚ್ಚು.