ವಿಂಡೀಸ್ ಸರಣಿಯಿಂದ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡ ಶಿಖರ್ ಧವನ್
ಶಿಖರ್ ಧವನ್ ಕಳೆದ ಕೆಲವು ಸಮಯದಿಂದ ಟಿ20 ತಂಡದಲ್ಲಿ ಸ್ಥಾನ ಪಡೆಯುತ್ತಲೇ ಇಲ್ಲ. ಆದರೆ ಅವರಿಗೆ ವಿಶ್ವಕಪ್ ಆಡುವ ಮಹದಾಸೆಯಿದೆ. ಇದಕ್ಕೆ ವೆಸ್ಟ್ ಇಂಡೀಸ್ ಸರಣಿ ಭದ್ರ ಅಡಿಪಾಯ ಹಾಕಿಕೊಟ್ಟಿದೆ ಎನ್ನಬಹುದು.
ವಿಂಡೀಸ್ ಸರಣಿಯಲ್ಲಿ ಧವನ್ ನಿಧಾನಗತಿಯ ಆಟವಾಡಿ ಕೊಂಚ ಟೀಕೆಗೊಳಗಾಗಿದ್ದು ಇದೆ. ಆದರೆ ರನ್ ಗಳಿಸಿ ಭಾರತ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುತ್ತಿದ್ದರು. ಹೀಗಾಗಿ ತಾನು ಇನ್ನೂ ಟಿ20 ವಿಶ್ವಕಪ್ ತಂಡಕ್ಕೆ ಸ್ಥಾನ ಪಡೆಯಬಹುದಾದ ಆಟಗಾರರ ರೇಸ್ ನಲ್ಲಿರುವುದಾಗಿ ಸುಳಿವು ನೀಡಿದ್ದಾರೆ. ರೋಹಿತ್ ಶರ್ಮಾರ ಮೆಚ್ಚಿನ ಆಟಗಾರರಾಗಿರುವ ಧವನ್ ಟಿ20 ವಿಶ್ವಕಪ್ ತಂಡಕ್ಕೆ ವಾಪಸಾತಿಯಾದರೂ ಅಚ್ಚರಿಯಿಲ್ಲ.