ರಾಹುಲ್ ದ್ರಾವಿಡ್ ಪ್ರಯೋಗಕ್ಕೆ ಭಾರೀ ಟೀಕೆ
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ರನ್ನು ಆರಂಭಿಕರಾಗಿ ಕಣಕ್ಕಿಳಿಸಿದ್ದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಟೀಕೆಗೆ ಗುರಿಯಾಗಿದೆ. ಅತಿಯಾಗಿ ಪ್ರಯೋಗ ಒಳ್ಳೆಯದಲ್ಲ, ಸೂರ್ಯಕುಮಾರ್ ಯಾದವ್ ರಂತಹ ಆಟಗಾರರನ್ನು ಆರಂಭಿಕರಾಗಿ ಕಣಕ್ಕಿಳಿಸಿದ್ದು ತಪ್ಪು ಎಂದು ಅವರು ದ್ರಾವಿಡ್ ಯೋಜನೆಯನ್ನು ಪ್ರಶ್ನಿಸಿದ್ದಾರೆ.
ಇನ್ನು ಟಿ20 ಕ್ರಿಕೆಟ್ ಗೆ ಹೇಳಿ ಮಾಡಿಸಿದಂತಹ ದೀಪಕ್ ಹೂಡಾರನ್ನು ಕೈ ಬಿಟ್ಟು ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸುವ ಶ್ರೇಯಸ್ ಅಯ್ಯರ್ ಗೆ ಸ್ಥಾನ ನೀಡಿದ್ದು ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಟೀಕೆಗೆ ಗುರಿಯಾಗಿದೆ. ದ್ರಾವಿಡ್ ರೀತಿ ಯೋಚನೆ ಇಲ್ಲಿ ಬೇಕಾಗಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.