ಸಹಾಯ ಮಾಡುವುದರಲ್ಲಿ ರೋಹಿತ್ ಶರ್ಮಾರದ್ದು ಎತ್ತಿದ ಕೈ: ಶಿಖರ್ ಧವನ್ ಹೊಗಳಿಕೆ

ಸೋಮವಾರ, 21 ಮಾರ್ಚ್ 2022 (08:40 IST)
ನವದೆಹಲಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಗ್ಗೆ ಕ್ರಿಕೆಟಿಗ ಶಿಖರ್ ಧವನ್ ಭರಪೂರ ಹೊಗಳಿಕೆ ನೀಡಿದ್ದಾರೆ.

ರೋಹಿತ್ ಶರ್ಮಾ ಸದಾ ಕೂಲ್ ಆಗಿ ರಿಲ್ಯಾಕ್ಸ್ ಆಗಿ ಇರುತ್ತಾರೆ. ಅವರು ತಮ್ಮೊಂದಿಗಿದ್ದವರನ್ನೂ ತಮಾಷೆ ಮಾಡುತ್ತಾ ಖುಷಿಯಾಗಿ ನೋಡಿಕೊಳ್ಳುತ್ತಾರೆ ಎಂದು ಧವನ್ ಹೊಗಳಿದ್ದಾರೆ.

‘ಅವರು ಈಗ ಟೀಂ ಇಂಡಿಯಾದ ನಾಯಕರಾಗಿರಬಹುದು. ಆದರೆ ಈಗಲೂ ಮೊದಲಿನ ರೋಹಿತ್ ಆಗಿಯೇ ಉಳಿದಿದ್ದಾರೆ. ಇನ್ನೊಬ್ಬರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ. ನಿಮಗೆ ಯಾವುದಾದರೂ ಕಠಿಣ ವಿಷಯ ಹೇಳಬೇಕಾಗಿದ್ದರೂ ನೋವಾಗದಂತೆ ತಿಳಿಸುವ ಒಳ್ಳೆಯತನ ಅವರಲ್ಲಿದೆ’ ಎಂದು ಧವನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ