Rohit Sharma: ಟೀಂ ಇಂಡಿಯಾ ಬಸ್ ನಲ್ಲಿ ರೋಹಿತ್ ಶರ್ಮಾ ಸೀಟ್ ಈಗ ಯಾರದ್ದು

Krishnaveni K

ಸೋಮವಾರ, 16 ಜೂನ್ 2025 (10:38 IST)
Photo Credit: X
ಲಂಡನ್: ಟೀಂ ಇಂಡಿಯಾ ಕ್ರಿಕೆಟಿಗರು ತಂಡ ಪ್ರಯಾಣಿಸುವ ಬಸ್ ನಲ್ಲೂ ತಮ್ಮದೇ ಆಸನ ಹೊಂದಿರುತ್ತಾರೆ. ಇದೀಗ ರೋಹಿತ್ ಶರ್ಮಾ ನಿವೃತ್ತಿಯಾದ ಬಳಿಕ ಅವರ ಸೀಟ್ ನಲ್ಲಿ ಯಾರು ಕುಳಿತುಕೊಳ್ಳುತ್ತಿದ್ದಾರೆ? ಈ ಪ್ರಶ್ನೆಗೆ ಕುಲದೀಪ್ ಯಾದವ್ ಉತ್ತರಿಸಿದ್ದಾರೆ ನೋಡಿ.

ಟೀಂ ಇಂಡಿಯಾ ಈಗ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿದೆ. ಹೋಟೆಲ್ ರೂಂನಿಂದ ಮೈದಾನಕ್ಕೆ ತೆರಳುವಾಗ ಟೀಂ ಬಸ್ ನಲ್ಲಿ ರೋಹಿತ್ ಹೆಚ್ಚಾಗಿ ಮುಂದಿನ ಸೀಟ್ ನಲ್ಲೇ ಕೂರುತ್ತಿದ್ದರು. ಅವರ ಜೊತೆಗೆ ರವೀಂದ್ರ ಜಡೇಜಾ ಕುಳಿತುಕೊಳ್ಳುತ್ತಿದ್ದರು.

ಆದರೆ ಈಗ ರೋಹಿತ್ ಶರ್ಮಾ ಸ್ಥಾನದಲ್ಲಿ ಕುಲದೀಪ್ ಯಾದವ್ ಕುಳಿತುಕೊಳ್ಳುತ್ತಿದ್ದಾರಂತೆ. ಇದನ್ನು ಅವರು ಪತ್ರಿಕಾಗೋಷ್ಠಿಯಲ್ಲೇ ಹೇಳಿಕೊಂಡಿದ್ದಾರೆ. ಮಾಜಿ ಕ್ಯಾಪ್ಟನ್ ಜಾಗದಲ್ಲಿ ಹಾಲಿ ಕಾಪ್ಟನ್ ಶುಬ್ಮನ್ ಗಿಲ್ ಕುಳಿತುಕೊಳ್ಳುತ್ತಿದ್ದಾರಾ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು  ‘ಶುಬ್ಮನ್ ಗಿಲ್ ಅಲ್ಲ, ರವೀಂದ್ರ ಜಡೇಜಾ ಪಕ್ಕದಲ್ಲಿ ರೋಹಿತ್ ಶರ್ಮಾ ಸ್ಥಾನದಲ್ಲಿ ಈಗ ನಾನು ಕುಳಿತುಕೊಳ್ಳುತ್ತಿದ್ದೇನೆ. ರೋಹಿತ್ ಭಾಯಿ ಸ್ಥಾನವನ್ನು ನಾನು ತುಂಬಲಾರೆ. ನನಗೆ ಜಡೇಜಾ ಜೊತೆಗೆ ಉತ್ತಮ ಬಾಂಧವ್ಯವಿದೆ ಎಂಬ ಕಾರಣಕ್ಕೆ ಅವರ ಜೊತೆ ನಾನು ಕುಳಿತುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.

ಅಶ್ವಿನ್ ಇದ್ದಾಗ ಅವರ ಬಳಿ ಸಾಕಷ್ಟು ಕಲಿತಿದ್ದೆ. ಈಗ ಅವರೂ ತಂಡದಲ್ಲಿಲ್ಲ. ಹೀಗಾಗಿ ನನ್ನ ಸೀನಿಯರ್ ಜಡೇಜಾ ಜೊತೆ ಕಾಲ ಕಳೆಯುತ್ತಿದ್ದೇನೆ. ಯಾಕೆಂದರೆ ನಾನು ವೃತ್ತಿ ಜೀವನ ಆರಂಭಿಸಿದಾಗ ಇಬ್ಬರ ಜೊತೆಗೂ ಆಡಿದ್ದೇನೆ. ನನ್ನ ಸ್ಪಿನ್ ಪಾರ್ಟನರ್ ಆಗಿ ಜಡೇಜಾ ಇರುವುದು ನನಗೆ ತುಂಬಾ ಖುಷಿಯ ವಿಚಾರ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ