ವಿಂಡೀಸ್ ಸರಣಿಯಿಂದ ಶಿಖರ್ ಧವನ್ ಗೆ ಗಾಯ! ಸಂಜು ಸ್ಯಾಮ್ಸನ್ ಬಯಸಿದ್ದು ಸಿಕ್ತು!
ಬುಧವಾರ, 27 ನವೆಂಬರ್ 2019 (10:14 IST)
ಮುಂಬೈ: ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಆಡುವಾಗ ಗಾಯಗೊಂಡಿದ್ದ ಶಿಖರ್ ಧವನ್ ವೆಸ್ಟ್ ಇಂಡೀಸ್ ಸರಣಿಯಿಂದಲೇ ಔಟ್ ಆಗಿದ್ದಾರೆ. ಆ ಅದೃಷ್ಟ ಇದೀಗ ಸಂಜು ಸ್ಯಾಮ್ಸನ್ ಗೆ ಖುಲಾಯಿಸಿದೆ.
ವಿಂಡೀಸ್ ಸರಣಿಗೆ ಸಂಜು ಸ್ಯಾಮ್ಸನ್ ರನ್ನು ಕೈ ಬಿಟ್ಟಿದ್ದಕ್ಕೆ ಅಭಿಮಾನಿಗಳು ಆಯ್ಕೆ ಸಮಿತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಆಯ್ಕೆ ಸಮಿತಿ ಸದಸ್ಯರನ್ನು ವಜಾಗೊಳಿಸುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಆಗ್ರಹಿಸಿದ್ದರು.
ಇದೀಗ ಧವನ್ ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಗೆ ಕರೆ ಬಂದಿದೆ. ಇದರೊಂದಿಗೆ ಆಯ್ಕೆ ಸಮಿತಿ ಟೀಕೆಯಿಂದ ತಪ್ಪಿಸಿಕೊಂಡಿದೆ. ಅತ್ತ ಸಂಜು ಸ್ಯಾಮ್ಸನ್ ಗೂ ಅದೃಷ್ಟ ಖುಲಾಯಿಸಿದೆ.