ಅಂತಾರಾಷ್ಟ್ರೀಯ ಕ್ರಿಕೆಟ್ ಆಡಲು ಧೋನಿಗೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಆಫರ್

ಮಂಗಳವಾರ, 26 ನವೆಂಬರ್ 2019 (10:08 IST)
ಢಾಕಾ: ಟೀಂ ಇಂಡಿಯಾ ಜೆರ್ಸಿ ತೊಟ್ಟು ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳದೇ ಹಲವು ದಿನಗಳೇ ಕಳೆದಿವೆ. ಧೋನಿ ವಾಪಸಾತಿ ಬಗ್ಗೆ ಯಾರೂ ಸ್ಪಷ್ಟ ಉತ್ತರ ನೀಡುತ್ತಿಲ್ಲ. ಈ ನಡುವೆ ಧೋನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡಲು ಬಾಂಗ್ಲಾ ಕ್ರಿಕೆಟ್ ಮಂಡಳಿ ಆಫರ್ ನೀಡಿದೆ.

 
ಮುಂದಿನ ವರ್ಷ ಮಾರ್ಚ್ 18 ಮತ್ತು 21 ರಂದು ಢಾಕಾದಲ್ಲಿ ವಿಶ್ವ ಇಲೆವೆನ್ ವಿರುದ್ಧ ಏಷ್ಯಾ ಇಲೆವೆನ್ ಟಿ20 ಕ್ರಿಕೆಟ್ ಆಡಲಿದೆ. ಈ ಪ್ರತಿಷ್ಠಿತ ಸರಣಿಯಲ್ಲಿ ಆಡಲು ಟೀಂ ಇಂಡಿಯಾದ ಏಳು ಆಟಗಾರರಿಗೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಆಹ್ವಾನವಿತ್ತಿದೆ.

ಈ ಪೈಕಿ ಧೋನಿ ಕೂಡಾ ಒಬ್ಬರು ಎನ್ನಲಾಗಿದೆ. ಈ ಬಗ್ಗೆ ಇನ್ನೂ ಬಿಸಿಸಿಐ ಜತೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಮಾತುಕತೆ ನಡೆಸುತ್ತಿದೆ. ಇದಾದ ಬಳಿಕವೇ ಧೋನಿ ಆಡುವ ಬಗ್ಗೆ ಸ್ಪಷ್ಟ ಉತ್ತರ ಸಿಗಲಿದೆ. 2007 ರಲ್ಲಿ ಧೋನಿ ಏಷ್ಯಾ ಇಲೆವೆನ್ ಪರ ಟಿ20 ಕ್ರಿಕೆಟ್ ಆಡಿ ಭರ್ಜರಿ ಪ್ರದರ್ಶನ ನೀಡಿದ್ದರು. ಹೀಗಾಗಿ ಮತ್ತೆ ವಿಶ್ವ ಇಲೆವೆನ್ ವಿರುದ್ಧದ ಆಟವೇ ಧೋನಿಗೆ ಕಮ್ ಬ್ಯಾಕ್ ವೇದಿಕೆಯಾಗಿಲಿದೆಯೇ ಎಂದು ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ