ಸಿಎಸ್ ಕೆ ಪಾಲಿಗೆ ವಿಲನ್ ಆದ ಶಿವಂ ದುಬೆಗೆ ಹಿಗ್ಗಾಮುಗ್ಗಾ ಟೀಕೆ
17 ನೇ ಓವರ್ ಗೆ ಮುಕ್ತಾಯವಾದಾಗ ಪಂದ್ಯ ಸಿಎಸ್ ಕೆ ಹಿಡಿತದಲ್ಲೇ ಇತ್ತು. ಲಕ್ನೋ 4 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತ್ತು. ಸಿಎಸ್ ಕೆ ಗೆಲುವಿನ ಅವಕಾಶವಿತ್ತು. ಆದರೆ 18 ನೇ ಓವರ್ ಮಾಡಲು ಬಂದ ಶಿವಂ ದುಬೆ ಬರೋಬ್ಬರಿ 25 ರನ್ ಬಿಟ್ಟುಕೊಟ್ಟರು. ಬೌಂಡರಿ ಸಿಕ್ಸರ್ ಗಳ ಜೊತೆಗೆ ಎರಡು ವೈಡ್ ಎಸೆತವನ್ನೂ ಎಸೆದರು.
ದುಬೆಯ ಹಳಿ ತಪ್ಪಿದ ಬೌಲಿಂಗ್ ನಿಂದಾಗಿ ಲಕ್ನೋ 18 ನೇ ಓವರ್ ಮುಕ್ತಾಯದ ವೇಳೆಗೆ 202 ಕ್ಕೆ ತಲುಪಿತ್ತು! ಹೀಗಾಗಿ ಚೆನ್ನೈ ಪಾಲಿಗೆ ವಿಲನ್ ಆದ ದುಬೆಯನ್ನು ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಟೀಕಿಸಿದ್ದಾರೆ. ಇನ್ನು, ಟ್ವಿಟರಿಗರಂತೂ ವಿವಿಧ ಮೆಮೆಗಳ ಮೂಲಕ ಲೇವಡಿ ಮಾಡಿದ್ದಾರೆ.