ಐಪಿಎಲ್ 2022: ಆರ್ ಸಿಬಿಗೆ ಗೆಲುವು ಕೊಡಿಸಿದ ಬೌಲರ್ ಗಳು
ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ ಸಿಬಿ 3 ವಿಕೆಟ್ ಗಳ ಗೆಲುವು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 18.5 ಓವರ್ ಗಳಲ್ಲಿ 128 ರನ್ ಗಳಿಗೆ ಆಲೌಟ್ ಆಯಿತು. ಆಂಡ್ರೆ ರಸೆಲ್ 25 ರನ್ ಗಳಿಸಿದ್ದೇ ಗರಿಷ್ಠ. ಆರ್ ಸಿಬಿ ಪರ ವನಿಂದು ಹಸರಂಗ 4 ಆಕಾಶ್ ದೀಪ್ 3, ಹರ್ಷಲ್ ಪಟೇಲ್ 2 ವಿಕೆಟ್ ಕಬಳಿಸಿದರು.
ಇತ್ತ ಆರ್ ಸಿಬಿ ಕೂಡಾ ಬ್ಯಾಟಿಂಗ್ ನಲ್ಲಿ ತಡವರಿಸಿತು. ಮೊದಲ ಪಂದ್ಯದಲ್ಲಿ ಸಿಡಿದಿದ್ದ ನಾಯಕ ಫಾ ಡು ಪ್ಲೆಸಿಸ್ 5 ರನ್ ಗಳಿಸಿದರೆ ಕಿಂಗ್ ಕೊಹ್ಲಿ 12 ರನ್ ಗೆ ಔಟಾದರು. ಆದರೆ ರುದರ್ ಫೋರ್ಡ್ 28, ಶಹಬಾಜ್ ಅಹಮ್ಮದ್ 27 ರನ್ ಗಳಿಸಿ ತಂಡಕ್ಕೆ ಗೆಲುವು ಕೊಡಿಸಿದರು. ಅಂತಿಮವಾಗಿ ಆರ್ ಸಿಬಿ 19.2 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು.