ಶ್ರೇಯಸ್ ಅಯ್ಯರ್ ಐಪಿಎಲ್ ಗೂ ಅನುಮಾನ?

ಮಂಗಳವಾರ, 14 ಮಾರ್ಚ್ 2023 (08:30 IST)
Photo Courtesy: Twitter
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಬೆನ್ನು ನೋವಿಗೊಳಗಾಗಿ ಬ್ಯಾಟಿಂಗ್ ಮಾಡದೇ ಇದ್ದ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಗಾಯ ಗಂಭೀರವಾಗಿದೆ ಎನ್ನಲಾಗಿದೆ.

ಅವರನ್ನು ತಕ್ಷಣವೇ ಸ್ಕ್ಯಾನಿಂಗ್ ಗೆ ಕಳುಹಿಸಲಾಗಿತ್ತು. ಶ್ರೇಯಸ್ ಪದೇ ಪದೇ ಬೆನ್ನು ನೋವಿಗೊಳಗಾಗುತ್ತಿರುವುದರಿಂದ ಶಸ್ತ್ರಚಿಕಿತ್ಸೆಗೊಳಗಾಗುವ ಸಾಧ‍್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಹೀಗಾಗಿ ಈ ಬಾರಿ ಐಪಿಎಲ್ ನಲ್ಲೂ ಅವರು ಆಡುವುದು ಅನುಮಾನ ಎನ್ನಲಾಗಿದೆ. ಕೋಲ್ಕೊತ್ತಾ ನೈಟ್ ರೈಡರ್ಸ್ ನಾಯಕರಾಗಿರುವ ಶ್ರೇಯಸ್ ಈ ಮೊದಲೊಮ್ಮೆ ಡೆಲ್ಲಿ ತಂಡದಲ್ಲಿದ್ದಾಗ ಗಾಯದಿಂದಾಗಿ ಇಡೀ ಐಪಿಎಲ್ ಸೀಸನ್ ಕಳೆದುಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ