ಲಂಕಾ ಸೋಲಿಸಿದ ಕಿವೀಸ್: ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಗೆ ಟೀಂ ಇಂಡಿಯಾ
ಶ್ರೀಲಂಕಾ ಮತ್ತು ಭಾರತ ನಡುವೆ ಗೆಲುವಿನ ಸರಾಸರಿ ಲೆಕ್ಕಾಚಾರದಲ್ಲಿ ಪೈಪೋಟಿಯಿತ್ತು. ಒಂದು ವೇಳೆ ಲಂಕಾ ಇಂದು ಗೆಲುವು ಕಂಡಿದ್ದರೆ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಕನಸು ಭಗ್ನವಾಗುತ್ತಿತ್ತು. ಆದರೆ ಲಂಕಾ ಸೋತಿದ್ದರಿಂದ ಭಾರತದ ಫೈನಲ್ ಹಾದಿ ಸುಗಮವಾಗಿದೆ. ಇದೀಗ ನಡೆಯುತ್ತಿರುವ ಆಸೀಸ್ ವಿರುದ್ಧದ ಟೆಸ್ಟ್ ಡ್ರಾನತ್ತ ಸಾಗುತ್ತಿದ್ದು, ಈ ಪಂದ್ಯದ ಫಲಿತಾಂಶಕ್ಕೆ ಯಾವುದೇ ಮಹತ್ವವಿಲ್ಲವಾಗಿದೆ.
ಇಂದು ಕೇನ್ ವಿಲಿಯಮ್ಸನ್ ಅಜೇಯ ಶತಕ (121) ಮತ್ತು ಡೆರಿಲ್ ಮಿಚೆಲ್ (81) ಸಾಹಸದ ಬ್ಯಾಟಿಂಗ್ ನಿಂದಾಗಿ ನ್ಯೂಜಿಲೆಂಡ್ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು. ಅಂತಿಮವಾಗಿ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿ ಭಾರತದ ಹಾದಿ ಸುಗಮವಾಗಿಸಿತು.