ಮುಲ್ಲನ್‌ಪುರ: ಭಾರತದ ಸ್ಟಾರ್ ಕ್ರಿಕೆಟ್ ಆಟಗಾರರಾದ ಶುಬ್ಮನ್ ಗಿಲ್ ಹಾಗೂ ಹಾರ್ದಿಕ್ ಪಾಂಡ್ಯ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಗುಸು ಗುಸು ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿ ಹರಿದಾಡುತ್ತಿದೆ.
ಇದರ ಬೆನ್ನಲ್ಲೇ ಈ ಎಲ್ಲ ಊಹಾಪೋಹಗಳಿಗೆ ಗುಜರಾತ್ ಟೈಟನ್ಸ್ ನಾಯಕ ಶುಬ್ಮನ್ ಗಿಲ್ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯಾಟದ ವೇಳೆ ಟೀಂ ಇಂಡಿಯಾದ ಇಬ್ಬರು ಪ್ರಮುಖ ಆಟಗಾರರು ಪರಸ್ಪರ ಮುನಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಟಾಸ್ ವೇಳೆಯೇ ಇಬ್ಬರು ಒಬ್ಬರನೊಬ್ಬರ ಮುಖವನ್ನು ನೋಡಲು ಇಷ್ಟಪಡಲಿಲ್ಲ. ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ, ಶುಬ್ಮನ್ ಗಿಲ್‌ಗೆ ಶೇಕ್ ಹ್ಯಾಂಡ್ ಮಾಡಲು ಮುಂದಾದಗ ಅದನ್ನು ಅವರು ಲೆಕ್ಕಿಸದೆ ಬೇರೆಡೆ ಗಮನಕೊಟ್ಟಿದ್ದಾರೆ.
ಅದಲ್ಲದೆ ಬ್ಯಾಟಿಂಗ್ ವೇಳೆ ಶುಬ್ಮನ್ ಗಿಲ್ ಔಟ್ ಆದಾಗ ಹಾರ್ದಿಕ್ ಪಾಂಡ್ಯ ಅವರ ಹತ್ತಿರಕ್ಕೆ ಬಂದು ಸಂಭ್ರಮಾಚರಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದನ್ನು ನೋಡಿದ ನೆಟ್ಟಿಗರು, ಇವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂದಿದ್ದಾರೆ. ಇನ್ನೂ ಈ ವಿಡಿಯೋ ವೈರಲ್ ಆಗುತ್ತಿದ್ದ ಹಾಗೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಶುಭ್‌ಗಿಲ್ ಪ್ರತಿಕ್ರಿಯಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಜತೆಗಿನ ನಿನ್ನೆಯ ಫೋಟೋ ಹಾಗೂ ಈ ಹಿಂದೆ ಟೀಂ ಇಂಡಿಯಾದ ಪಂದ್ಯಾಟದ ವೇಳೆಯೇ ಆತ್ಮೀಯ ಕ್ಷಣದ ಫೋಟೋವನ್ನು ಶೇರ್ ಮಾಡಿ, ಇದೆಲ್ಲ ಪ್ರೀತಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಎಲ್ಲ ವಿಷಯಗಳನ್ನು ನಂಬಬೇಡಿ ಎಂದು ಶುಭ್‌ಮನ್ ಗಿಲ್ ಬರೆದುಕೊಂಡಿದ್ದಾರೆ.