ಸೋಲಿನ ಬೆನ್ನಲ್ಲೇ ಆರ್ ಸಿಬಿ ನಾಯಕತ್ವಕ್ಕೆ ವಿದಾಯ ಹೇಳಲು ನಿರ್ಧರಿಸಿದ ಸ್ಮೃತಿ ಮಂಧನಾ?
ಚೊಚ್ಚಲ ಮಹಿಳಾ ಐಪಿಎಲ್ ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಆರ್ ಸಿಬಿ ಕಣಕ್ಕಿಳಿದಿತ್ತು. ಆದರೆ ಘಟಾನುಘಟಿ ಆಟಗಾರರಿದ್ದೂ ಆರ್ ಸಿಬಿ ಇದುವರೆಗೆ ಒಂದೇ ಒಂದು ಗೆಲುವು ಕಂಡಿಲ್ಲ. ಸತತ ನಾಲ್ಕು ಸೋಲುಗಳಿಂದ ನಾಯಕಿ ಸ್ಮೃತಿ ಮಂಧನಾ ತೀವ್ರ ಬೇಸರಕ್ಕೊಳಗಾಗಿದ್ದಾರೆ.
ಇದರಿಂದಾಗಿ ಮುಂದಿನ ಐಪಿಎಲ್ ವೇಳೆಗೆ ತಂಡದ ನಾಯಕತ್ವದಿಂದ ಹಿಂದೆ ಸರಿಯುವ ಸಾಧ‍್ಯತೆಯಿದೆ ಎನ್ನಲಾಗಿದೆ. ಅವರು ಕೇವಲ ಆಟಗಾರ್ತಿಯಾಗಿ ಮುಂದುವರಿಯುವ ಯೋಜನೆ ಹೊಂದಿದ್ದಾರೆ ಎನ್ನಲಾಗಿದೆ. ಈ ಬಾರಿಯ ಎಲ್ಲಾ ಸೋಲುಗಳಿಗೆ ತಾವೇ ಹೊಣೆ ಎಂದು ಸ್ಮೃತಿ ಮಂಧನಾ ಜವಾಬ್ಧಾರಿ ಹೊತ್ತುಕೊಂಡಿದ್ದರು.