ಬಿಸಿಸಿಐ ಅಧ್ಯಕ್ಷ ಪಟ್ಟದ ರೇಸ್ ನಲ್ಲಿ ಸೌರವ್ ಗಂಗೂಲಿ
ಅದರ ಜತೆಗೆ ಕೋಲ್ಕತ್ತಾ ಕ್ರಿಕೆಟ್ ಸಂಸ್ಥೆ ಹಾಲಿ ಅಧ್ಯಕ್ಷ, ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ರೇಸ್ ನಲ್ಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಗಂಗೂಲಿ, ಅಧ್ಯಕ್ಷನಾದರೆ ತಮ್ಮ ಪ್ರಮುಖ ಆದ್ಯತೆ ದೇಶೀಯ ಕ್ರಿಕೆಟ್ ನ ಉದ್ದಾರ ಮಾಡುವುದು ಮತ್ತು ಕ್ರಿಕೆಟಿಗರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಆಗಿರುತ್ತದೆ ಎಂದಿದ್ದಾರೆ. ಆದರೆ ಕೊನೆಗೆ ಯಾರು ಭಾರತೀಯ ಕ್ರಿಕೆಟ್ ಮಂಡಳಿಯ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವುದು ಕಾದು ನೋಡಬೇಕಿದೆ.