ವಿರಾಟ್ ಕೊಹ್ಲಿಯನ್ನು ಕೊನೆಗೂ ಒಪ್ಪಿಕೊಂಡ ಗೌತಮ್ ಗಂಭೀರ್

ಸೋಮವಾರ, 14 ಅಕ್ಟೋಬರ್ 2019 (09:54 IST)
ನವದೆಹಲಿ: ಗೌತಮ್ ಗಂಭೀರ್ ಇದುವರೆಗೂ ವಿರಾಟ್ ಕೊಹ್ಲಿಯ ನಾಯಕತ್ವ ಚೆನ್ನಾಗಿದೆ ಎಂದು ಒಪ್ಪಿಕೊಳ್ಳುತ್ತಲೇ ಇರಲಿಲ್ಲ. ಆದರೆ ದ.ಆಫ್ರಿಕಾ ವಿರುದ್ಧ ಭರ್ಜರಿ ಸರಣಿ ಗೆಲುವಿನ ಬಳಿಕ ಗಂಭೀರ್ ಈಗ ಒಪ್ಪಿಕೊಳ್ಳಲೇಬೇಕಾಗಿ ಬಂದಿದೆ.


ಮೈದಾನದಲ್ಲಿ ಅಂದು ನಡೆದಿದ್ದ ವೈಷಮ್ಯವನ್ನೇ ಮುಂದುವರಿಸಿಕೊಂಡು ಬಂದಿರುವ ಗಂಭೀರ್ ಈಗಲೂ ಆಗಾಗ ಅವಕಾಶ ಸಿಕ್ಕಾಗಲೆಲ್ಲಾ ಕೊಹ್ಲಿಯನ್ನು ಟೀಕೆ ಮಾಡುತ್ತಾರೆ. ಆದರೆ ಈಗ ಕೊಹ್ಲಿಯೂ ಶ್ರೇಷ್ಠ ನಾಯಕ ಎಂದು ಒಪ್ಪಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಕೊಹ್ಲಿ ಗಂಗೂಲಿ, ಧೋನಿ, ರಾಹುಲ್ ದ್ರಾವಿಡ್ ಗೆ ಹೋಲಿಸಿದರೆ ಇನ್ನೂ ಉತ್ತಮ ನಾಯಕ.  ಅವರು ವಿದೇಶದಲ್ಲೂ ಸರಣಿ ಗೆಲ್ಲುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಕೊಹ್ಲಿ ಸೋಲೆಂದರೆ ಭಯಪಡುತ್ತಾರೆ. ಅದೇ ಅವರ ದೊಡ್ಡ ಪ್ಲಸ್ ಪಾಯಿಂಟ್ ಎಂದು ಗಂಭೀರ್ ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ