ತ್ರಿರಾಷ್ಟ್ರಗಳ ಏಕ ದಿನ ಅಂತಾರಾಷ್ಟ್ರೀಯ ಸರಣಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ವಿರುದ್ಧ 47 ರನ್ ಜಯಗಳಿಸುವ ಮೂಲಕ ನೆಟ್ ರನ್ ರೇಟ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಿದೆ. ಎಲ್ಲಾ ಬ್ಯಾಟ್ಸ್‌ಮನ್‌ಗಳ ಸಹನೆ ಮತ್ತು ತಂತ್ರಕ್ಕೆ ಸವಾಲು ಹಾಕಿದ ಮೈದಾನದಲ್ಲಿ ದಕ್ಷಿಣ ಆಫ್ರಿಕಾದ ಸಾಧಾರಣ 9 ವಿಕೆಟ್‌ಗೆ 189 ರನ್ ಬೆನ್ನತ್ತಿದ ಆಸ್ಟ್ರೇಲಿಯಾ ಪರ ಓಪನರ್ ಆರಾನ್ ಫಿಂಚ್ ಅವರು ಪ್ರತಿರೋಧ ತೋರಿ 72 ರನ್ ಗಳಿಸಿದರಾದರೂ ಆಸ್ಟ್ರೇಲಿಯಾ 34.2 ಓವರುಗಳಲ್ಲಿ 142 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲಪ್ಪಿದೆ.
ಈ ಜಯದ ಅಂತರದಿಂದ ದಕ್ಷಿಣ ಆಫ್ರಿಕಾ ಬೋನಸ್ ಪಾಯಿಂಟ್ ಗಳಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ನೆಟ್ ರನ್ ರೇಟ್‌ನಲ್ಲಿ ಕೊನೆಯಿಂದ ಮೊದಲ ಸ್ಥಾನಕ್ಕೆ ಜಿಗಿದಿದ್ದು, ವೆಸ್ಟ್ ಇಂಡೀಸ್ ತಂಡವನ್ನು ಮೂರನೇ ಸ್ಥಾನಕ್ಕೆ ದೂಡಿದೆ. ಫರ್ಹಾನ್ ಬೆಹರಡೀನ್ ಅವರ 62 ರನ್ ಪಂದ್ಯ ಶ್ರೇಷ್ಟ ಪ್ರಶಸ್ತಿಯನ್ನು ದಕ್ಕಿಸಿಕೊಟ್ಟಿತು. ರಬಾಡಾ ಮನೋಜ್ಞ ಬೌಲಿಂಗ್ ಮಾಡಿ 13 ರನ್ ನೀಡಿ 3 ವಿಕೆಟ್ ಕಬಳಿಸಿದರು.