Team India: ಕೊಹ್ಲಿ ಅಲ್ಲ, ಬುಮ್ರಾ ಅಲ್ಲ ಟೀಂ ಇಂಡಿಯಾ ಹೊಸ ಕ್ಯಾಪ್ಟನ್ ಇವರೇ

Krishnaveni K

ಭಾನುವಾರ, 11 ಮೇ 2025 (09:36 IST)
ಮುಂಬೈ: ರೋಹಿತ್ ಶರ್ಮಾ ನಿವೃತ್ತಿ ಬಳಿಕ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಹೊಸ ನಾಯಕ ಯಾರು ಎಂಬುದು ಇದೀಗ ಬಯಲಾಗಿದೆ. ಕೊಹ್ಲಿ ಅಲ್ಲ, ಬುಮ್ರಾನೂ ಅಲ್ಲ ಟೀಂ ಇಂಡಿಯಾ ಹೊಸ ನಾಯಕ ಇವರೇ ಎಂಬ ಮಾತು ಕೇಳಿಬರುತ್ತಿದೆ.

ನಾಲ್ಕು ದಿನಗಳ ಹಿಂದೆ ರೋಹಿತ್ ಶರ್ಮಾ ಟೆಸ್ಟ್ ಮಾದರಿಗೆ ದಿಡೀರ್ ನಿವೃತ್ತಿ ಘೋಷಿಸಿದ್ದರು. ಬಿಸಿಸಿಐ ರೋಹಿತ್ ಶರ್ಮಾರನ್ನು ಟೆಸ್ಟ್ ನಾಯಕತ್ವದಿಂದ ಕೈ ಬಿಡಲು ತೀರ್ಮಾನಿಸಿದ್ದಕ್ಕೇ ರೋಹಿತ್ ನಿವೃತ್ತಿ ಘೋಷಿಸಿದ್ದರು ಎನ್ನಲಾಗುತ್ತಿದೆ.

ಈ ನಡುವೆ ತಂಡದ ಹೊಸ ನಾಯಕ ಯಾರಾಗಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. ವಿರಾಟ್ ಕೊಹ್ಲಿಯನ್ನೇ ಮತ್ತೆ ಕ್ಯಾಪ್ಟನ್ ಮಾಡ್ತಾರಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಇದರ ನಡುವೆ ರಿಷಭ್ ಪಂತ್, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ ಎಲ್ಲರೂ ರೇಸ್ ನಲ್ಲಿದ್ದರು.

ಆದರೆ ಇವರೆಲ್ಲರ ಹೊರತಾಗಿ ಭವಿಷ್ಯದ ದೃಷ್ಟಿಯಿಂದ ಶುಬ್ಮನ್ ಗಿಲ್ ಗೆ ಟೆಸ್ಟ್ ತಂಡದ ನಾಯಕತ್ವದ ಹೊಣೆ ನೀಡಲಾಗುತ್ತಿದೆ ಎನ್ನಲಾಗಿದೆ. ಮೇ 23 ರಂದು ಬಿಸಿಸಿಐ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ