Rohit Sharma:ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಗಾಟಿಸಿದ ವಿಶೇಷ ವ್ಯಕ್ತಿಗಳು ಯಾರು ವಿಡಿಯೋ ನೋಡಿ
ಇತ್ತೀಚೆಗಷ್ಟೇ ಟೆಸ್ಟ್ ತಂಡದಿಂದ ನಿವೃತ್ತಿಯಾಗಿರುವ ರೋಹಿತ್ ಶರ್ಮಾಗೆ ಇಂದು ಮುಂಬೈ ಕ್ರಿಕೆಟ್ ಸಂಸ್ಥೆ ವಿಶೇಷ ಗೌರವ ನೀಡಿದೆ. ಮುಂಬೈನ ವಾಂಖೆಡೆ ಮೈದಾನದ ಒಂದು ಸ್ಟ್ಯಾಂಡ್ ಗೆ ರೋಹಿತ್ ಶರ್ಮಾ ಹೆಸರನ್ನಿಟ್ಟಿದೆ.
ಈ ಮೂಲಕ ತವರಿನ ಯಶಸ್ವೀ ನಾಯಕನಿಗೆ ವಿಶೇಷ ಗೌರವ ನೀಡಲಾಗಿದೆ. ಈ ಸ್ಟ್ಯಾಂಡ್ ಉದ್ಘಾಟನೆ ಮಾಡಿದವರೂ ವಿಶೇಷ ವ್ಯಕ್ತಿಗಳೇ. ಅವರು ಬೇರೆ ಯಾರೂ ಅಲ್ಲ. ರೋಹಿತ್ ಶರ್ಮಾ ತಂದೆ ಮತ್ತು ತಾಯಿ.
ತಮ್ಮ ಮಗನ ಹೆಸರಿನ ಸ್ಟ್ಯಾಂಡ್ ನ್ನು ರೋಹಿತ್ ಪೋಷಕರು ಹೆಮ್ಮೆಯಿಂದಲೇ ಲೋಕಾರ್ಪಣೆ ಮಾಡಿದರು. ಈ ವಿಶೇಷ ಗಳಿಗೆಗೆ ರೋಹಿತ್ ಶರ್ಮಾ ಮತ್ತು ಇಡೀ ಮುಂಬೈ ಇಂಡಿಯನ್ಸ್ ತಂಡ ಸಾಕ್ಷಿಯಾಗಿತ್ತು.