ಇಂದಿನ ಟೀಂ ಇಂಡಿಯಾ ಟೆಸ್ಟ್ ಪಂದ್ಯಕ್ಕೆ ಇವರೇ ವಿಶೇಷ ಅತಿಥಿಗಳು!

ಶನಿವಾರ, 4 ಮಾರ್ಚ್ 2017 (09:37 IST)
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ವಿಶೇಷ ಅತಿಥಿಗಳು ಆಗಮಿಸಿದ್ದಾರೆ. ಅವರು 5 ಸಾವಿರ ಸೈನಿಕರು ಮತ್ತು 15 ಸಾವಿರ ಶಾಲಾ ಮಕ್ಕಳು!


ಕೆಎಸ್ ಸಿಎ ಈ ವಿಶೇಷ ವೀಕ್ಷಕರಿಗಾಗಿ ಉಚಿತ ಪಾಸ್ ನೀಡಿದೆ. ಆಯ್ದ ಶಾಲೆಗಳ 15 ಸಾವಿರ ಮಕ್ಕಳು ಕ್ರಿಕೆಟಿಗರಿಗೆ ಚಪ್ಪಾಳೆ ತಟ್ಟಿ ಹುರಿದುಂಬಿಸಲಿದ್ದಾರೆ. ಕಳೆದ ಪಂದ್ಯದಲ್ಲೂ ಪುಣೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಾಲಾ ಮಕ್ಕಳು ಆಗಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಅದೇ ರೀತಿ ಸೈನಿಕರಿಗೂ ಉಚಿತ ಪಾಸ್ ನೀಡಲಾಗಿದೆ.ದೇಶ ಕಾಯುವ ಸೈನಿಕರಿಗೆ ಈ ಮೂಲಕ ಗೌರವ ಅರ್ಪಿಸಲಾಗಿದೆ. ಅಂತಿಮ ಮೂರು ದಿನ ಸೈನಿಕರು ಆಗಮಿಸಲಿದ್ದಾರೆ. ಸೇನಾ ಕೇಂದ್ರ ಕಚೇರಿ ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಸೈನಿಕರಿಗೆ ಉಚಿತ ಪಾಸ್ ನೀಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ