ದ.ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾದ ಟೀಂ ಇಂಡಿಯಾ ವಿಶೇಷತೆ ಏನು ಗೊತ್ತಾ?!
ಮಂಗಳವಾರ, 5 ಡಿಸೆಂಬರ್ 2017 (08:45 IST)
ನವದೆಹಲಿ: ದ. ಆಫ್ರಿಕಾದಲ್ಲಿ ನಡೆಯಲಿರುವ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಏಕದಿನ ಸ್ಪೆಷಲಿಸ್ಟ್ ಗಳೂ ಆಯ್ಕೆಯಾಗಿದ್ದಾರೆ.
ಆಫ್ರಿಕಾದ ವೇಗದ ಪಿಚ್ ಗಳಲ್ಲಿ ಪೈಪೋಟಿ ನೀಡಲು ಟೀಂ ಇಂಡಿಯಾದ ಡೆತ್ ಓವರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾರನ್ನೂ ಆಯ್ಕೆ ಮಾಡಲಾಗಿದ್ದು, ಹಿರಿಯ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಗೂ ಅವಕಾಶ ಕಲ್ಪಿಸಲಾಗಿದೆ. ಈ ತಂಡದ ವಿಶೇಷತೆಯೆಂದರೆ 17 ಸದಸ್ಯರ ತಂಡದಲ್ಲಿ 6 ವೇಗಿಗಳನ್ನು ಆಯ್ಕೆ ಮಾಡಲಾಗಿದೆ.