ಬೆಂಗಳೂರು: ಕೊರೋನಾ ಎಲ್ಲರಲ್ಲೂ ಒಂದೇ ರೀತಿಯ ಲಕ್ಷಣ ಹೊರ ಹಾಕುತ್ತಿಲ್ಲ. ಸಾಮಾನ್ಯವಾಗಿ ಜ್ವರ, ಗಂಟಲು ನೋವು, ತಲೆನೋವು, ಶೀತ ಇತ್ಯಾದಿ ಲಕ್ಷಣಗಳು ಕೊರೋನಾ ಲಕ್ಷಣಗಳು ಎಂದು ನಂಬಲಾಗಿದೆ.
ಆದರೆ ಇದರ ಹೊರತಾಗಿಯೂ ಕೊರೋನಾ ಗೊತ್ತಿಲ್ಲದೆಯೇ ನಿಮ್ಮನ್ನು ಆವರಿಸುತ್ತದೆ. ಅದು ಹೇಗೆ ಗೊತ್ತಾ? ಕೆಲವರಿಗೆ ಇದ್ದಕ್ಕಿದ್ದಂತೆ ಹೃದಯ ಸಂಬಂಧೀ ಖಾಯಿಲೆ ಬರುವುದು, ಮೆದುಳಿಗೆ ಸಂಬಂಧಿಸಿದ ತೊಂದರೆ ಕಾಣಿಸಿಕೊಳ್ಳುವುದು ಇತ್ಯಾದಿ.
ಅದರ ಹೊರತಾಗಿ ಇವು ಯಾವುದೂ ಲಕ್ಷಣವಿಲ್ಲದೇ ಹಸಿವಾಗದೇ ಇರುವುದು, ಬಾಯಿ ರುಚಿ ಇಲ್ಲದೇ ಇರುವುದು ಕೂಡಾ ಕೊರೋನಾದ ಹೊಸ ಲಕ್ಷಣಗಳಾಗಿವೆ. ಹೀಗಾಗಿ ಇಂತಹ ಯಾವುದೇ ಲಕ್ಷಣವಿದ್ದರೂ ವೈದ್ಯರನ್ನು ಸಂಪರ್ಕಿಸಿ ಪರೀಕ್ಷಿಸುವುದು ಉತ್ತಮ.