ಭಾರತ-ಲಂಕಾ ಟಿ20: ‘ಸೂರ್ಯ’ನ ತಾಪಕ್ಕೆ ನಲುಗಿದ ಶ್ರೀಲಂಕಾ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭದಲ್ಲೇ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಆರಂಭ ನೋಡಿದಾಗ ಯಾರೂ ಟೀಂ ಇಂಡಿಯಾ ಇಷ್ಟು ದೊಡ್ಡ ಮೊತ್ತ ಪೇರಿಸಬಹುದು ಎಂದು ನಿರೀಕ್ಷೆಯೂ ಮಾಡಿರಲ್ಲ.
ಆದರೆ ರಾಹುಲ್, ತ್ರಿಪಾಠಿ ಸೂರ್ಯಕುಮಾರ್ ಯಾದವ್ ಮತ್ತು ಶುಬ್ನಂ ಗಿಲ್ ಜೋಡಿ ಭಾರತದ ರನ್ ಬೇಟೆಗೆ ಆರಂಭವಿತ್ತು. ಗಿಲ್ 36 ಎಸೆತಗಳಲ್ಲಿ 46 ರನ್ ಸಿಡಿಸಿ ಔಟಾದರೆ ರಾಹುಲ್ ತ್ರಿಪಾಠಿ ಕೇವಲ 16 ಎಸೆತಗಳಿಂದ 35 ರನ್ ಚಚ್ಚಿದರು. ಬಳಿಕ ಪಂದ್ಯದ ಗತಿ ಬದಲಾಯಿಸಿದ್ದು ಸೂರ್ಯಕುಮಾರ್ ಯಾದವ್. ಒಟ್ಟು 51 ಎಸೆತ ಎದುರಿಸಿದ ಸೂರ್ಯ ಅಜೇಯ 112 ರನ್ ಗಳಿಸಿದರು. ಇದು ಭಾರತದ ಪರ ಟಿ20 ಕ್ರಿಕೆಟ್ ನಲ್ಲಿ ಎರಡನೇ ಅತೀ ವೇಗದ ಶತಕವಾಗಿದೆ. ಸೂರ್ಯ ಪಾಲಿಗೆ ಇದು ಮೂರನೇ ಟಿ20 ಶತಕವಾಗಿತ್ತು. ಈ ಇನಿಂಗ್ಸ್ ನಲ್ಲಿ 9 ಸಿಕ್ಸರ್ ಸೇರಿತ್ತು. ಇವರಿಗೆ ತಕ್ಕ ಸಾಥ್ ನೀಡಿದ ಅಕ್ಸರ್ ಪಟೇಲ್ 9 ಎಸೆತಗಳಿಂದ 21 ರನ್ ಗಳಿಸಿ ಅಜೇಯರಾಗುಳಿದರು. ಇದರೊಂದಿಗೆ ಇಂಡಿಯಾ ಎದುರಾಳಿಗೆ ಗೆಲ್ಲಲು 229 ರನ್ ಗಳ ಬೃಹತ್ ಗುರಿ ನಿಗದಿಪಡಿಸಿದೆ.