ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಮುಂದಿನ ಪಂದ್ಯ ಯಾರ ಜೊತೆ?

ಶುಕ್ರವಾರ, 4 ನವೆಂಬರ್ 2022 (09:10 IST)
Photo Courtesy: Twitter
ಅಡಿಲೇಡ್: ಬಾಂಗ್ಲಾದೇಶ ವಿರುದ್ಧ ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಸ್ಥಾನ ಭದ್ರಪಡಿಸಿಕೊಂಡಿರುವ ಟೀಂ ಇಂಡಿಯಾ ಇನ್ನೊಂದು ಲೀಗ್ ಪಂದ್ಯವಾಡಬೇಕಿದೆ.

ಇದುವರೆಗೆ ನಾಲ್ಕು ಪಂದ್ಯಗಳನ್ನಾಡಿರುವ ಟೀಂ ಇಂಡಿಯಾ ಮೂರು ಗೆಲುವು ಕಂಡಿದ್ದು, ಒಟ್ಟು 6 ಅಂಕ ಸಂಪಾದಿಸಿದೆ. ಪಾಸಿಟಿವ್ ಸರಾಸರಿ ಅಂಕವನ್ನೂ ಹೊಂದಿದೆ.

ಇದೀಗ ಕೊನೆಯ ಲೀಗ್ ಪಂದ್ಯವನ್ನು ಟೀಂ ಇಂಡಿಯಾ ದುರ್ಬಲ ಜಿಂಬಾಬ್ವೆ ವಿರುದ್ಧ ಆಡಲಿದೆ. ಈ ಪಂದ್ಯ ಭಾನುವಾರ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯಲಿದೆ.  ಈ ಪಂದ್ಯದ ಬಳಿಕ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ