ಮತ್ತೆ ನೋ ಬಾಲ್ ವಿವಾದ: ಟೀಂ ಇಂಡಿಯಾ ಮೋಸ ಮಾಡಿದೆ ಎಂದು ಆರೋಪಿಸಿದ ಬಾಂಗ್ಲಾ

ಗುರುವಾರ, 3 ನವೆಂಬರ್ 2022 (09:10 IST)
Photo Courtesy: Twitter
ಅಡಿಲೇಡ್: ಟೀಂ ಇಂಡಿಯಾ ನಿನ್ನೆ ಬಾಂಗ್ಲಾದೇಶ ವಿರುದ್ಧ ಟಿ20 ಪಂದ್ಯದಲ್ಲಿ ಗೆಲುವಿನ ಬಳಿಕ ಬಾಂಗ್ಲಾ ಅಭಿಮಾನಿಗಳು ಬಿಸಿಸಿಐ, ಭಾರತ ತಂಡದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆಯ ಪಂದ್ಯದಲ್ಲಿ ಮತ್ತೆ ನೋ ಬಾಲ್ ವಿವಾದ ಕಾಣಿಸಿಕೊಂಡಿದೆ. ಸ್ಕ್ವೇರ್ ಲೆಗ್ ಅಂಪಾಯರ್ ಕಡೆಗೆ ಕೊಹ್ಲಿ ಎರಡು ಬಾರಿ ಸನ್ನೆ ಮಾಡಿದ ಬಳಿಕ ಅಂಪಾಯರ್ ನೋ ಬಾಲ್ ಘೋಷಿಸಿದ್ದರು. ಇದು ಬಾಂಗ್ಲಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲಲು ಐಸಿಸಿಯೇ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಇದಕ್ಕೆ ಮೊದಲು ಪಾಕ್ ವಿರುದ್ಧದ ಪಂದ್ಯದಲ್ಲೂ ಅಂಪಾಯರ್ ಕೊಹ್ಲಿಯ ಸನ್ನೆ ಬಳಿಕ ನೋ ಬಾಲ್ ಘೋಷಿಸಿದ್ದರು. ಆದರೆ ಈ  ಎಲ್ಲಾ ಬಾರಿಯೂ ನಿಜವಾಗಿಯೂ ಕೊಹ್ಲಿ ಮನವಿ ನ್ಯಾಯಯುತವಾಗಿತ್ತು. ನಿನ್ನೆಯ ಪಂದ್ಯದಲ್ಲಿ ಕೊಹ್ಲಿ ಸನ್ನೆ ಮಾಡಿದ್ದಕ್ಕೆ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಅಂಪಾಯರ್ ಬಳಿ ಬಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಎದುರಾಳಿ ನಾಯಕರು ಎರಡೂ ಬಾರಿಯೂ ಅಂಪಾಯರ್ ಬಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ