ಕೊಹ್ಲಿ ಫೇಕ್ ಫೀಲ್ಡಿಂಗ್ ಮಾಡಿದ್ದರೂ ಬಾಂಗ್ಲಾಗೆ ಪೆನಾಲ್ಟಿ ರನ್ ಸಿಗಲಿಲ್ಲ ಯಾಕೆ? ಇಲ್ಲಿದೆ ಕಾರಣ

ಗುರುವಾರ, 3 ನವೆಂಬರ್ 2022 (16:21 IST)
Photo Courtesy: Twitter
ಅಡಿಲೇಡ್: ಬಾಂಗ್ಲಾದೇಶದ ವಿರುದ್ಧ ಟಿ20 ವಿಶ್ವಕಪ್ ಪಂದ್ಯದಲ್ಲಿ ಕೊಹ್ಲಿ ಫೇಕ್ ಫೀಲ್ಡಿಂಗ್ ಮಾಡಿ ಮೋಸದಾಟ ಆಡಿದ್ದಾರೆ ಎಂದು ಬಾಂಗ್ಲಾ ಕ್ರಿಕೆಟಿಗ ನೂರುಲ್ ಹಸನ್ ಆರೋಪಿಸಿದ್ದರು.

ಒಂದು ವೇಳೆ ಇದು ನಿಜವೇ ಆಗಿದ್ದರೆ ಬಾಂಗ್ಲಾಗೆ 5 ಪೆನಾಲ್ಟಿ ರನ್ ನೀಡಬಹುದಿತ್ತು. ಆದರೆ ಅಂಪಾಯರ್ ಗಳು ಇದನ್ನು ಪರಿಗಣಿಸದೇ ಇರುವುದಕ್ಕೆ ಕಾರಣವಿದೆ.

ಈ ಘಟನೆ ನಡೆದಿದ್ದು ಪಂದ್ಯದ 7 ನೇ ಓವರ್ ನಲ್ಲಿ. ಅಕ್ಸರ್ ಪಟೇಲ್ ಎಸೆದ ಎಸೆತವನ್ನು ಲಿಟನ್ ದಾಸ್ ಡೀಪ್ ಆಫ್ ಕಡೆಗೆ ತಳ್ಳಿದರು. ಈ ವೇಳೆ ಫೀಲ್ಡಿಂಗ್ ಮಾಡಿದ ಅರ್ಷ್ ದೀಪ್ ಸಿಂಗ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕಡೆಗೆ ಬಾಲ್ ಎಸೆದರು. ಅದು ಕೊಹ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕ್ಷೇತ್ರದ ಮೂಲಕವೇ ಹಾದು ಹೋಯಿತು. ಆಗ ಕೊಹ್ಲಿ ಚೆಂಡು ಹಿಡಿದು ಎಸೆಯುವಂತೆ ಸನ್ನೆ ಮಾಡಿದರು.

ನಿಯಮದ ಪ್ರಕಾರ ಎದುರಾಳಿ ಆಟಗಾರನ ಗಮನ ಬೇರೆಡೆ ಸೆಳೆಯಲು ಈ ರೀತಿ ಬಾಲ್ ಹಿಡಿದವರಂತೆ ನಾಟಕ ಮಾಡುವುದು ತಪ್ಪು. ಹಾಗೆ ಮಾಡಿದಲ್ಲಿ ಎದುರಾಳಿಗೆ 5 ರನ್ ಪೆನಾಲ್ಟಿ ನೀಡಬಹುದು. ಒಂದು ವೇಳೆ ಹಾಗಾಗಿದ್ದರೆ ನಾವು ಪಂದ್ಯ ಗೆಲ್ಲುತ್ತಿದ್ದೆವು ಎಂಬುದು ನೂರುಲ್ ವಾದ.

ಆದರೆ ನಿನ್ನೆಯ ಪಂದ್ಯದಲ್ಲಿ ಅಂಪಾಯರ್ ಅದನ್ನು ಪರಿಗಣಿಸದೇ ಇರುವುದಕ್ಕೆ ಕಾರಣವಿತ್ತು. ಅಸಲಿಗೆ ಕೊಹ್ಲಿ ಈ ರೀತಿ ಸನ್ನೆ ಮಾಡಿದ್ದನ್ನು ಬಾಂಗ್ಲಾ ಬ್ಯಾಟಿಗರು ಗಮನಿಸಿಯೇ ಇರಲಿಲ್ಲ. ಅಂದ ಮೇಲೆ ಅವರು ಕನ್ ಫ್ಯೂಸ್‍ ಆಗುವ ಪ್ರಶ್ನೆ ಎಲ್ಲಿಂದ ಬರುತ್ತದೆ? ಈ ಕಾರಣಕ್ಕೇ ಬಾಂಗ್ಲಾಗೆ 5 ಪೆನಾಲ್ಟಿ ರನ್ ನೀಡಿಲ್ಲ ಎಂಬುದು ತಜ್ಞರ ವಾದ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ