T20 World Cup 2024: ಬಾಂಗ್ಲಾದೇಶ ವಿರುದ್ಧ ದ ಆಫ್ರಿಕಾಗೆ ರೋಚಕ ಜಯ

Krishnaveni K

ಮಂಗಳವಾರ, 11 ಜೂನ್ 2024 (09:00 IST)
ನ್ಯೂಯಾರ್ಕ್: ಟಿ20 ವಿಶ್ವಕಪ್ 2024 ರಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯವನ್ನು ದ ಆಫ್ರಿಕಾ 4 ರನ್ ಗಳಿಂದ ರೋಚಕವಾಗಿದ್ದ ಗೆದ್ದುಕೊಂಡಿದೆ. ಇದರೊಂದಿಗೆ ಆಫ್ರಿಕಾ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಂತಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ದ. ಆಫ್ರಿಕಾ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿತು. ಇದೂ ಕೂಡಾ ಮತ್ತೊಂದು ಲೋ ಸ್ಕೋರಿಂಗ್ ಪಂದ್ಯವಾಗಿತ್ತು. ಆಫ್ರಿಕಾಗೆ ಟಾಪ್ ಬ್ಯಾಟಿಗರು ಕೈ ಕೊಟ್ಟಾಗ ಕೆಳ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸನ್ 46 ರನ್ ಗಳಿಸಿ ತಂಡಕ್ಕೆ ಆಧಾರವಾದರು. ಅವರಿಗೆ ಸಾಥ್ ನೀಡಿದ ಡೇವಿಡ್ ಮಿಲ್ಲರ್ ನಿಧಾನಗತಿಯಲ್ಲಿ 29 ರನ್ ಗಳಿಸಿದರು. ತನ್ಝಿಮ್ ಹಸನ್ ಶಕೀಬ್ 3, ತಸ್ಕೀನ್  ಅಹಮ್ಮದ್ 2 ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಕೂಡಾ ಅಗ್ರ ಕ್ರಮಾಂಕದ ವೈಫಲ್ಯಕ್ಕಕೊಳಗಾಯಿತು. ತೌಹಿದ್ ಹೃದೊಯ್ 37 ರನ್, ಮುಹಮ್ಮದುಲ್ಲ 20 ರನ್ ಗಳಿಸಿದರು. ಆದರೆ ಕೊನೆಯಲ್ಲಿ ಬಾಂಗ್ಲಾ 20  ಓವರ್ ಗಳಲ್ಲಿ  7 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಲಷ್ಟೇ ಶಕ್ತವಾಯಿತು. ಆಫ್ರಿಕಾ ಪರ ಕೇಶವ್ ಮಹಾರಾಜ್ 3, ಅನ್ರಿಚ್ ನೋರ್ಜೆ, ಕಗಿಸೊ ರಬಾಡ ತಲಾ 2 ವಿಕೆಟ್ ಕಬಳಿಸಿದರು.

ಇದರೊಂದಿಗೆ ದ.ಆಫ್ರಿಕಾ ಆಡಿದ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಡಿ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ. ಇಂದು ಪಾಕಿಸ್ತಾನ ಮತ್ತು ಕೆನಡಾ ತಂಡಗಳು ಮುಖಾಮುಖಿಯಾಗಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ