ಟಿ20 ವಿಶ್ವಕಪ್:ಟೀಂ ಇಂಡಿಯಾಕ್ಕೆ ಕೊನೇ ಪಂದ್ಯ ಇಂದು
ನಿನ್ನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಗೆಲುವು ಸಾಧಿಸುವುದರೊಂದಿಗೆ ಟೀಂ ಇಂಡಿಯಾ ಸೆಮಿಫೈನಲ್ ಹಾದಿ ಬಂದ್ ಆಗಿದೆ. ಇದರೊಂದಿಗೆ ಲೀಗ್ ಹಂತದಲ್ಲೇ ಅಭಿಯಾನ ಕೊನೆಗೊಳಿಸಿ ನಿರಾಸೆ ಅನುಭವಿಸಿದೆ.
ಕಳೆದ ಪಂದ್ಯದಲ್ಲಿ ಸ್ಕಾಟ್ ಲೆಂಡ್ ವಿರುದ್ಧ ಭರ್ಜರಿ ಜಯ ಗಳಿಸಿದ್ದ ಭಾರತ ಅದೇ ತಂಡವನ್ನು ಇಲ್ಲಿ ಕಣಕ್ಕಿಳಿಸಬಹುದು. ಈ ಪಂದ್ಯವೂ ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30 ಕ್ಕೆ ಆರಂಭವಾಗಲಿದೆ.