ರಣಜಿ ಕ್ರಿಕೆಟ್ ಸೆಮಿಫೈನಲ್ ನಲ್ಲಿ ಮೂರು ಬಾರಿ ಬಾಲ್ ಬದಲಾಯಿಸಿದ್ದಕ್ಕೆ ಕೋಚ್ ಬಾಲಾಜಿ ಅಸಮಧಾನ

ಮಂಗಳವಾರ, 3 ಜನವರಿ 2017 (15:15 IST)
ನಾಗ್ಪುರ: ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ತಮಿಳುನಾಡು ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಮೂರು ಬಾರಿ ಬಾಲ್ ಬದಲಾಯಿಸಿದ್ದಕ್ಕೆ ತಮಿಳುನಾಡು ಕೋಚ್ ಎಲ್. ಬಾಲಾಜಿ ಅಸಮಧಾನ ವ್ಯಕ್ತಪಡಿಸಿದ್ದಾರೆ.

ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಎಸ್ ಜಿ ಕಂಪನಿ ನಿರ್ಮಿತ ಬಾಲ್ ಬಳಸಲಾಗುತ್ತದೆ. ಇದನ್ನು ಒಂದೇ ಅವಧಿಯಲ್ಲಿ ಎರಡು ಬಾರಿ ಸೇರಿದಂತೆ ದಿನದಲ್ಲಿ ಮೂರು ಬಾರಿ ಬದಲಾಯಿಸಿ ಕಿರಿ ಕಿರಿ ಉಂಟು ಮಾಡಿರುವುದಕ್ಕೆ ಅವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಇದರಿಂದ ಬೌಲರ್ ಮತ್ತು ಬ್ಯಾಟ್ಸ್ ಮನ್ ಏಕಾಗ್ರತೆಗೆ ಭಂಗವಾಗುತ್ತದೆ. ಮೊದಲ ಅವಧಿಯಲ್ಲೇ ಬಾಲ್ ಶೇಪ್ ಸರಿಯಿಲ್ಲವೆನ್ನುವ ಕಾರಣಕ್ಕೆ ಮತ್ತೊಂದು ಬಾಲ್ ನೀಡಲಾಯಿತು. ಇದರಿಂದ ಆಟಗಾರರು ಆಗಾಗ ಯೋಜನೆ ಬದಲಿಸುತ್ತಿರಬೇಕಾಯಿತು. ಕ್ರಿಕೆಟ್ ನಲ್ಲಿ ಬಾಲ್ ಆಟದ ಸಂಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇನ್ನೊಂದೆಡೆ ಮುಂಬೈ ತಂಡದ ಕೋಚ್ ಚಂದ್ರಕಾಂತ್ ಪಂಡಿತ್ ಕೂಡಾ ಬಾಲಾಜಿ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ