TATA IPL 2025: ಬಾರಿಸಿದ ಸಿಕ್ಸರ್‌ಗೆ ಕಾರಿನ ಗಾಜು ಪುಡಿ ಪುಡಿ, ಖುಷಿಯಲ್ಲಿದ್ದ SRH ಬ್ಯಾಟರ್‌ಗೆ ಬಿತ್ತು ದಂಡ

Sampriya

ಶನಿವಾರ, 24 ಮೇ 2025 (16:28 IST)
Photo Credit X
ನವದೆಹಲಿ: ಎಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 65 ನೇ ಪಂದ್ಯದಲ್ಲಿ ಆರ್‌ಸಿಬಿ  ವಿರುದ್ಧ ಪಂದ್ಯದ ವೇಳೆ ಅಭಿಷೇಕ್‌ ಅವರ ಸಿಕ್ಸ್‌ಗೆ ಬಹುಮಾನವಾಗಿ ನಿಲ್ಲಿಸಿದ್ದ ಕಾರಿನ ಗಾಜು ಪುಡಿಯಾದ ಘಟನೆ ನಡೆದಿದೆ.

ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಆಯ್ದು, ಎಸ್‌ಆರ್‌ಎಚ್‌ನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಇಬ್ಬರೂ ಸಿಕ್ಸರ್‌, ಬೌಂಡರಿಗಳನ್ನು ಬಾರಿಸಿ, ಒಳ್ಳೆಯ ಅಡಿಪಾಯವನ್ನು ಹಾಕಿದರು. ಅಭಿಷೇಕ್ ಬಲವಾದ ಸಿಕ್ಸರ್‌ಗೆ ಬೌಂಡರಿ ಗೆರೆ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಪುಡಿಯಾಯಿತು. ಸಾಮಾನ್ಯವಾಗಿ, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಕಾರನ್ನು ಬಹುಮಾನವಾಗಿ ಪಡೆಯುತ್ತಾರೆ. ಇದೀಗ ಈ ಕಾರಿನ ಗಾಜು ಪುಡಿಯಾಗಿದೆ.

ಕುತೂಹಲಕಾರಿ ವಿಷಯ ಏನೆಂದರೆ SRH ಬ್ಯಾಟರ್ ಈಗ ಗಾಜನ್ನು ಒಡೆದಿದ್ದಕ್ಕಾಗಿ ಭಾರಿ ದಂಡವನ್ನು ಪಾವತಿಸಬೇಕಾಗುತ್ತದೆ. ಈ ವಿಷಯ ಅಚ್ಚರಿ ಎನಿಸಿದರೂ, ನಿಜ.

ಇಂಡಿಯಾ ಹೆರಾಲ್ಡ್ ಪ್ರಕಾರ, ಪಂದ್ಯಾವಳಿ ಪ್ರಾರಂಭವಾಗುವ ಮೊದಲು, ಟಾಟಾ ಮೋಟಾರ್ಸ್ ಘೋಷಿಸಿದ್ದು, ಯಾವುದೇ ಆಟಗಾರ ಕಾರಿನ ಗಾಜು ಒಡೆದರೆ ಗ್ರಾಮೀಣ ಕ್ರಿಕೆಟ್ ಅಭಿವೃದ್ಧಿಗೆ INR 5 ಲಕ್ಷ ಮೌಲ್ಯದ ಕ್ರಿಕೆಟ್ ಕಿಟ್‌ಗಳನ್ನು ದಾನ ಮಾಡಬೇಕೆಂದು ಘೋಷಿಸಿದೆ.

TATA ಐಪಿಎಲ್‌ನ ಅಧಿಕೃತ ಪ್ರಾಯೋಜಕವಾಗಿದೆ ಮತ್ತು ಇದು ಗ್ರಾಮೀಣ ಪ್ರದೇಶಗಳಲ್ಲಿ ಆಟವನ್ನು ಉತ್ತೇಜಿಸಲು ಮತ್ತು ಅದನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಬ್ರ್ಯಾಂಡ್‌ನಿಂದ ಕೈಗೊಂಡ ಉಪಕ್ರಮವಾಗಿದೆ. ಇದರ ಇನ್ನೊಂದು ನಿದರ್ಶನವೆಂದರೆ LSG Vs SRH ಪಂದ್ಯದ ವೇಳೆ ಮಿಚ್ ಮಾರ್ಷ್ ಗಾಜು ಒಡೆದು ದಂಡ ತೆರಬೇಕಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ