RCB vs MI: ಇಂದಿನ ಮ್ಯಾಚ್ ನೋಡುವುದೇ ಮಜಾ ಯಾಕೆ ಗೊತ್ತಾ, ಮುಖಾಮುಖಿಯಾಗಲಿದ್ದಾರೆ ಒಡಹುಟ್ಟಿದವರು

Sampriya

ಸೋಮವಾರ, 7 ಏಪ್ರಿಲ್ 2025 (17:00 IST)
Photo Courtesy X
ಬೆಂಗಳೂರು: ಇಂದು ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್‌ 2025ರ ಪಂದ್ಯಾಟದಲ್ಲಿ ಸಹೋದರರಿಬ್ಬರು ಮುಖಾಮುಖಿಯಾಗಲಿದ್ದಾರೆ. ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ಇಂದು ಎದುರಾಗಳಿದ್ದು,  ಬಲಿಷ್ಠ ತಂಡಗಳ ಪಂದ್ಯಾಟಕ್ಕೆ ಕ್ರಿಕೆಟ್ ಪ್ರಿಯರು ಕಾತುರರಾಗಿದ್ದಾರೆ.

ಈ ಪಂದ್ಯಾಟದ ವಿಶೇಷತೆ ಏನೆಂದರೆ  ಇಂದು ಸಹೋದರರಿಬ್ಬರು ಎದುರಾಲಿಗಳಾಗಿ ಸೆಣೆಸಲಿದ್ದಾರೆ.  ಮುಂಬೈ ಇಂಡಿಯನ್ಸ್‌ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಅವರ ಸಹೋದರ ಕೃನಾಲ್ ಪಾಂಡ್ಯ ಆರ್‌ಸಿಬಿ ತಂಡದಿಂದ ಮುಖಾಮುಖಿಯಾಗಲಿದ್ದಾರೆ.

ಇನ್ನೂ ತಮ್ಮ ಅಪ್ಪನ ಆಟವನ್ನು ನೋಡಲು ಅವರ ಮಕ್ಕಳು ಜೆರ್ಸಿ ಹಾಕಿ ರೆಡಿಯಾಗಿದ್ದಾರೆ. ಹಾರ್ದಿಕ್ ಪಾಂಡ್ಯ  ಅವರು ತಮ್ಮ ಸಹೋದ ಕೃನಾಲ್ ಪಾಂಡ್ಯ ಜತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.  ಕೃನಾಲ್ ಪಾಂಡ್ಯ ಹಾಗೂ ಅವರ ಮಗ ಆರ್‌ಸಿಬಿ ಜೆರ್ಸಿಯೊಂದಿಗೆ ಹಾಗೂ ಹಾರ್ದಿಕ್ ಪಾಂಡ್ಯ ತಮ್ಮ ಮಗ ಅಗಸ್ತ್ಯನೊಂದಿಗೆ ಮುಂಬೈ ಇಂಡಿಯನ್ಸ್‌ ಜೆರ್ಸಿ ಧರಿಸಿ ಒಟ್ಟಿಗೆ ಪೋಟೋಗೆ ಫೋಸ್‌ ನೀಡಿದ್ದಾರೆ.

ಇದನ್ನು ನೋಡಿದ ಅಭಿಮಾನಿಗಳು ಇಂದಿನ ಪಂದ್ಯಾಟದಲ್ಲಿ ಸಹೋದರರಿಬ್ಬರ ಆಟ ನೋಡಲು ತುಂಬಾನೇ ಮಜಾವಾಗಿರುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ