IPL 2025 video: ಜುಟ್ಟು ಹಿಡಿದು ಎಳೀತೀನಿ ನಿಂದು.. ದಿಗ್ವೇಶ್ ಮೇಲೆ ಅಭಿಷೇಕ್ ಶರ್ಮಾ ರೋಷ
ನಿನ್ನೆಯ ಪಂದ್ಯವನ್ನು ಹೈದರಾಬಾದ್ 6 ವಿಕೆಟ್ ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಲಕ್ನೋ ಈ ಐಪಿಎಲ್ ನಿಂದ ಹೊರಬಿತ್ತು. ಹೈದರಾಬಾದ್ ಪರ ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ 59 ರನ್ ಚಚ್ಚಿದ್ದರು.
ಬಳಿಕ ದಿಗ್ವೇಶ್ ಬೌಲಿಂಗ್ ನಲ್ಲಿ ಶ್ರಾದ್ಧೂಲ್ ಠಾಕೂರ್ ಗೆ ಕ್ಯಾಚಿತ್ತು ಅಭಿಷೇಕ್ ನಿರ್ಗಮಿಸಿದರು. ತಮ್ಮ ಬೌಲಿಂಗ್ ನಲ್ಲಿ ಅಭಿಷೇಕ್ ರನ್ನು ಔಟ್ ಮಾಡಿದ ಬಳಿಕ ದಿಗ್ವೇಶ್ ಪೆವಿಲಿಯನ್ ಗೆ ನಡಿ ಎಂದು ಸನ್ನೆ ಮಾಡಿ ನೋಟ್ ಬುಕ್ ಸ್ಟೈಲ್ ನಲ್ಲಿ ಸೆಲೆಬ್ರೇಷನ್ ಮಾಡಿದರು.
ಹೀಗೆ ದಿಗ್ವೇಶ್ ತಮ್ಮ ಮುಖಕ್ಕೇ ಸೆಲೆಬ್ರೇಷನ್ ಮಾಡಿದ್ದು ಅಭಿಷೇಕ್ ಪಿತ್ತ ನೆತ್ತಿಗೇರಿಸಿತ್ತು. ಪೆವಿಲಿಯನ್ ಕಡೆಗೆ ನಡೆಯುತ್ತಿದ್ದವರು ದಿಗ್ವೇಶ್ ಜೊತೆ ಜಗಳಕ್ಕೆ ನಿಂತರು. ದಿಗ್ವೇಶ್ ಜುಟ್ಟು ಹಿಡಿದು ಎಳೆದೊಯ್ಯುವುದಾಗಿ ಸನ್ನೆ ಮಾಡಿದರು. ಇಬ್ಬರ ನಡುವೆ ಮಾತಿನ ಚಕಮಕಿ ತಾರಕಕ್ಕೇರುತ್ತಿದ್ದಂತೇ ಅಂಪಾಯರ್ ಗಳು, ಆಟಗಾರರು ಮಧ್ಯಪ್ರವೇಶಿಸಿ ದೂರ ಸರಿಸಿದರು. ಈ ವಿಡಿಯೋ ವೈರಲ್ ಆಗಿದೆ.