TATA IPL 2025:ಸೋಲಿನ ನೋವಿನಲ್ಲಿದ್ದ ಆರ್‌ಸಿಬಿ ಅಭಿಮಾನಿಗಳಿಗೆ Good News,ಬಂದ್ಬಿಟ್ಟ ಭರವಸೆಯ ಬೌಲರ್‌

Sampriya

ಭಾನುವಾರ, 25 ಮೇ 2025 (11:48 IST)
Photo Credit X
ಭಾರತೀಯ ಪ್ರೀಮಿಯರ್ ಲೀಗ್‌ 2025ರ ಆವೃತ್ತಿಯಲ್ಲಿ ಆಡಿದ ಕೇವಲ ಹತ್ತು ಪಂದ್ಯಗಳಲ್ಲಿ 18 ವಿಕೆಟ್‌ಗಳೊಂದಿಗೆ RCB ಯ ಅತಿ ಹೆಚ್ಚು ವಿಕೆಟ್ ಪಡೆದ  ಹ್ಯಾಜಲ್‌ವುಡ್‌ ಇದೀಗ ಮತ್ತೇ ವಾಪಾಸ್ಸಾಗಿದ್ದಾರೆ.

ಈ ಮೂಲಕ ಆರ್‌ಸಿಬಿಗೆ ಹೊಸ ಬಲ ಸಿಕ್ಕಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿಯಾಚೆಗಿನ ಉದ್ವಿಗ್ನತೆಯ ನಂತರ IPL ತಾತ್ಕಾಲಿಕವಾಗಿ ಸ್ಥಗಿತಗೊಂಡಾಗ ಅವರು ಆಸ್ಟ್ರೇಲಿಯಾಕ್ಕೆ ಮರಳಿದರು.

ಮನೆಯಲ್ಲಿ ಸ್ವಲ್ಪ ರಿಲ್ಯಾಕ್ಸ್ ಆದ ಬಳಿಕ ಅವರು ಪಂದ್ಯಾಟಕ್ಕೆ ವಾಪಾಸ್ಸಾವ ಮುನ್ಸೂಚನೆಯಿತ್ತು. ಅದಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗಾಗಿ ಆಸ್ಟ್ರೇಲಿಯಾದ ತಯಾರಿಯ ಭಾಗವಾಗಿ ಬ್ರಿಸ್ಬೇನ್‌ನಲ್ಲಿ ತರಬೇತಿ ಪಡೆದರು.

ಈಗಾಗಲೇ ಪ್ಲೇ ಆಫ್‌ಗೆ ಪ್ರವೇಶಿಸಿರುವ ಆರ್‌ಸಿಬಿ, ಶುಕ್ರವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯಾಟದಲ್ಲಿ ಸೋಲು ಅನುಭವಿಸಿ, ಸ್ವಲ್ಪ ಹಿನ್ನಡೆ ಅನುಭವಿಸಿತು. ಇದರಿಂದ  ಐಪಿಎಲ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯುವ ಗುರಿ ತಲುಪಲಿಲ್ಲ. ಸೋಲಿನ ನೋವಿನಲ್ಲಿದ್ದ ಆರ್‌ಸಿಬಿಗೆ ಇದೀಗ ಹ್ಯಾಜಲ್‌ವುಡ್‌ ಮರಳುವಿಕೆ ಹೊಸ ಭರವಸೆಯನ್ನು ನೀಡಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ