TATA WPL 2025: ಟಾಸ್ ವೇಳೆ ಆರ್ ಸಿಬಿ ತಾಕತ್ತು ತೋರಿಸಿದ ಫ್ಯಾನ್ಸ್ : ವಿಡಿಯೋ
ಇಂದು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ. ಎರಡೂ ತಂಡಗಳೂ ಪ್ಲೇಯಿಂಗ್ ಇಲೆವೆನ್ ನಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಆದರೆ ಇಂದಿನ ಪಂದ್ಯಕ್ಕೆ ಸ್ಟೇಡಿಯಂ ಹೌಸ್ ಫುಲ್ ಆಗಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಅದರಲ್ಲೂ ಮೈದಾನವಿಡೀ ಆರ್ ಸಿಬಿ ಅಭಿಮಾನಿಗಳು ತುಂಬಿಕೊಂಡಿದ್ದಾರೆ.
ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ಟಾಸ್ ವೇಳೆ ಮೈದಾನಕ್ಕೆ ಬರುತ್ತಿದ್ದಂತೇ ಅಭಿಮಾನಿಗಳ ಕೂಗು ಮೇರೆ ಮೀರಿತ್ತು. ಇನ್ನು, ನಾಯಕಿ ಸ್ಮೃತಿ ಮಂಧನಾ ಟಾಸ್ ವೇಳೆ ಮಾತನಾಡಲು ಬಂದಾಗಲಂತೂ ಕಿವಿ ಕಿವುಡಾಗುವಂತೆ ಆರ್ ಸಿಬಿ ಎಂದು ಕೂಗುತ್ತಿದ್ದರು.
ಎಷ್ಟೆಂದರೆ ಸ್ಮೃತಿ ಮಂಧನಾಗೆ ಸಂದರ್ಶಕರು ಕೇಳುತ್ತಿದ್ದ ಪ್ರಶ್ನೆಗಳೂ ಸರಿಯಾಗಿ ಕೇಳಿಸುತ್ತಿರಲಿಲ್ಲ. ಕೊನೆಗೆ ಅರೆಕ್ಷಣ ಸುಮ್ಮನೇ ನಗುತ್ತಾ ನಿಂತ ಸ್ಮೃತಿ ಸಂದರ್ಶಕರ ಪಕ್ಕಕ್ಕೆ ಹೋಗಿ ನಿಂತು ಮಾತನಾಡಿದರು.