ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 195 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭದಲ್ಲೇ ಮಯಾಂಕ್ ಅಗರ್ವಾಲ್ ರೂಪದಲ್ಲಿ ಆಘಾತ ಸಿಕ್ಕಿತ್ತು. ಮಯಾಂಕ್ ಶೂನ್ಯಕ್ಕೆ ನಿರ್ಗಮಿಸಿದರು. ಆಗ ಭಾರತವೂ ಖಾತೆ ತೆರೆದಿರಲಿಲ್ಲ. ಆದರೆ ಮತ್ತೊಂದು ತುದಿಯಲ್ಲಿ ಯುವ ಬ್ಯಾಟ್ಸ್ ಮನ್ ಶಬ್ನಂ ಗಿಲ್ ಭರವಸೆಯ ಆಟವಾಡುತ್ತಿದ್ದರು. ಅವಕಾಶ ಸಿಕ್ಕಾಗಲೆಲ್ಲಾ ಬೌಂಡರಿ ಗಳಿಸುತ್ತಾ 28 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಇವರಿಗೆ ಸಾಥ್ ಕೊಡುತ್ತಿರುವ ಚೇತೇಶ್ವರ ಪೂಜಾರ 7 ರನ್ ಗಳಿಸಿದ್ದಾರೆ. ಭಾರತ ಇನ್ನು, 159 ರನ್ ಗಳ ಹಿನ್ನಡೆಯಲ್ಲಿದೆ.