ಭಾರತ-ಆಸೀಸ್ ಟೆಸ್ಟ್: ಅಜಿಂಕ್ಯಾ ರೆಹಾನೆ ಕಣ್ಣೋ? ಕ್ಯಾಮರಾವೋ?

ಶನಿವಾರ, 26 ಡಿಸೆಂಬರ್ 2020 (09:47 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿರುವ ಅಜಿಂಕ್ಯಾ ರೆಹಾನೆ ಮೊದಲ ಅವಧಿಯಲ್ಲೇ ನಾಯಕತ್ವದ ಮೂಲಕ ಇಂಪ್ರೆಸ್ ಮಾಡಿದ್ದಾರೆ.

 

ಬೌಲರ್ ಗಳ ಆಯ್ಕೆ, ಬೌಲಿಂಗ್ ಸ್ಪೆಲ್ ನೀಡುವ ರೀತಿ, ಡಿಆರ್ ಎಸ್ ತೆಗೆದುಕೊಳ್ಳುವ ವಿಚಾರದಲ್ಲಿ ಅವರ ಪ್ರಬುದ್ಧ ನಡೆ ನೆಟ್ಟಿಗರು ಮೆಚ್ಚುಗೆಗೆ ಕಾರಣವಾಗಿದೆ. ವೈವಿದ್ಯಮಯ ಬೌಲಿಂಗ್ ನಿಂದಾಗಿ ಬೌಲರ್ ಗಳೂ ನಿಗದಿತವಾಗಿ ವಿಕೆಟ್ ಕೀಳುತ್ತಿದ್ದಾರೆ. ಇನ್ನು, ಎರಡೆರಡು ಬಾರಿ ಡಿಆರ್ ಎಸ್ ತೆಗೆದುಕೊಳ್ಳುವ ವಿಚಾರದಲ್ಲಿ ನಿಖರವಾದ ನಿರ್ಧಾರ ತೆಗೆದುಕೊಂಡು ಶಹಬ್ಬಾಶ್ ಗಿರಿ ಪಡೆದಿದ್ದಾರೆ. ಎರಡು ಬಾರಿ ಬೌಲರ್ ಗಳು ಡಿಆರ್ ಎಸ್ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದಾಗಲೂ ಸರಿಯಾಗಿ ನಿರ್ಣಯಿಸಿ ಡಿಆರ್ ಎಸ್ ತೆಗೆದುಕೊಳ್ಳದೇ ಇದ್ದ ರೆಹಾನೆಯದ್ದು ಅದೇನು ಸಾಮಾನ್ಯ ಕಣ್ಣೋ, ಕ್ಯಾಮರಾವೋ ಎಂದು ನೆಟ್ಟಿಗರು ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ