ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾ ಘೋಷಣೆ: ತಂಡದ ವಿವರ ಇಲ್ಲಿದೆ

ಸೋಮವಾರ, 8 ಮೇ 2017 (13:00 IST)
ಮುಂಬೈ: ಇಂಗ್ಲೆಂಡ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತೀಯ ಕ್ರಿಕೆಟ್ ತಂಡದ ಘೋಷಣೆಯಾಗಿದ್ದು, ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದವರೆಲ್ಲಾ ನಿರಾಸೆ ಅನುಭವಿಸಿದ್ದಾರೆ.

 
ಮರಳಿ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ ಹರ್ಭಜನ್ ಸಿಂಗ್ ಗೆ ನಿರಾಸೆಯಾಗಿದೆ. ಸುರೇಶ್ ರೈನಾ ಮೇಲಿನ ಮುನಿಸನ್ನು ಆಯ್ಕೆಗಾರರು ಮರೆತಿಲ್ಲ. ಹೀಗಾಗಿ ಇನ್ನೂ ತಂಡಕ್ಕೆ ಆಯ್ಕೆಯಾಗಿಲ್ಲ.  ಅವರ ಜತೆಗೆ ಐಪಿಎಲ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಹೊರತಾಗಿಯೂ ಗೌತಮ್ ಗಂಭೀರ್ ಗೆ ಮಣೆ ಹಾಕಿಲ್ಲ.

ಆರಂಭಿಕ ಸ್ಥಾನಕ್ಕೆ ರೋಹಿತ್ ಶರ್ಮಾ ಜತೆಗೆ ಮತ್ತೆ ಶಿಖರ್ ಧವನ್ ಗೆ ಅವಕಾಶ ಸಿಕ್ಕಿದೆ. ವೇಗಿ ಮೊಹಮ್ಮದ್ ಶಮಿ ತಂಡಕ್ಕೆ ಮರಳಲಿದ್ದು, ಆಶಿಷ್ ನೆಹ್ರಾಗೆ ಸ್ಥಾನ ಸಿಕ್ಕಿಲ್ಲ. ತಂಡದ ವಿವರ ಇಂತಿದೆ.

ವಿರಾಟ್ ಕೊಹ್ಲಿ (ನಾಯಕ),  ರೋಹಿತ್ ಶರ್ಮಾ,  ಶಿಖರ್ ಧವನ್,  ಅಜಿಂಕ್ಯಾ ರೆಹಾನೆ,  ಧೋನಿ, ಯುವರಾಜ್ ಸಿಂಗ್,  ಕೇದಾರ್ ಜಾದವ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್,  ರವೀಂದ್ರ ಜಡೇಜಾ,  ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್,  ಉಮೇಶ್ ಯಾದವ್, ಮನೀಶ್ ಪಾಂಡೆ ಮತ್ತು ಜಸ್ಪ್ರೀತ್ ಬುಮ್ರಾ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ