ನಮ್ಮ ಬೆಂಗಳೂರಿಗೆ ಬಂದಿಳಿದ ಟೀಂ ಇಂಡಿಯಾ ಹುಡುಗರು

ಮಂಗಳವಾರ, 31 ಜನವರಿ 2017 (09:08 IST)
ಬೆಂಗಳೂರು: ನಾಳೆ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ ಹುಡುಗರು ಬೆಂಗಳೂರಿಗೆ ಬಂದಿಳಿದಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಧೋನಿ ಸೇರಿದಂತೆ ಎಲ್ಲಾ ಆಟಗಾರರು ಕೆಂಪೇಗೌಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.

 
ನಂತರ ತಮ್ಮ ಹೋಟೆಲ್ ಕೊಠಡಿಗೆ ತೆರಳಿದ ಆಟಗಾರರು ನಿನ್ನೆಯಿಡೀ ವಿಶ್ರಾಂತಿ ಪಡೆದಿದ್ದಾರೆ. ಇಂದಿನಿಂದ ಅಭ್ಯಾಸ ಆರಂಭಿಸುವ ನಿರೀಕ್ಷೆಯಿದೆ. ಬೆಂಗಳೂರಿಗೆ ಬಂದಿಳಿದ ಆಟಗಾರರಿಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ದೊರಕಿತು.

ಕಿರು ಮಾದರಿ ಸರಣಿ 1-1 ರಿಂದ ಸಮಬಲ ಕಂಡಿದೆ. ಹೀಗಾಗಿ ನಾಳೆಯ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದ್ದು, ಫೈನಲ್ ಪಂದ್ಯದ ಕಳೆ ಬಂದಿದೆ. ಪಂದ್ಯ 7 ಗಂಟೆಗೆ ನಡೆಯಲಿದ್ದು ಟಿಕೆಟ್ ಗಳು ಭರ್ಜರಿ ಮಾರಾಟಗೊಂಡಿದೆ. ಹೀಗಾಗಿ ಕೊಹ್ಲಿ ಪಡೆಯನ್ನು ಹುರಿದುಂಬಿಸಲು ಮೈದಾನ ಭರ್ತಿಯಿರುವುದಂತೂ ಗ್ಯಾರಂಟಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ