ಇಂಗ್ಲೆಂಡ್ ಗೆ ತೆರಳಲು ಟೀಂ ಇಂಡಿಯಾ ಕ್ರಿಕೆಟಿಗರ ಕುಟುಂಬದವರಿಗೂ ಗ್ರೀನ್ ಸಿಗ್ನಲ್

ಬುಧವಾರ, 2 ಜೂನ್ 2021 (10:02 IST)
ಮುಂಬೈ: ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲು ಆಂಗ್ಲರ ನಾಡಿಗೆ ತೆರಳಲಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಕುಟುಂಬಸ್ಥರನ್ನೂ ಜೊತೆಗೆ ಕರೆದೊಯ್ಯಲು ಅನುಮತಿ ಸಿಕ್ಕಿದೆ.


ಕೊರೋನಾ ಕಾರಣದಿಂದ ಕ್ವಾರಂಟೈನ್ ಅವಧಿ ಮುಗಿಸಿ ಕ್ರಿಕೆಟಿಗರು ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ. ಆದರೆ ತಮ್ಮ ಜೊತೆಗೆ ಕುಟುಂಬಸ್ಥರನ್ನು ಕರೆದೊಯ್ಯಲು ಅನುಮತಿ ನೀಡಬೇಕೆಂದು ಬಿಸಿಸಿಐಗೆ ಬೇಡಿಕೆಯಿಟ್ಟಿದ್ದರು.

ಈ ಸಂಬಂಧ ಬಿಸಿಸಿಐ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಮನವಿ ಸಲ್ಲಿಸಿತ್ತು. ಅದರಂತೆ ಅಲ್ಲಿನ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕ್ರಿಕೆಟಿಗರ ಕುಟುಂಬಸ್ಥರಿಗೂ ಪ್ರಯಾಣಿಸಲು ಅನುಮತಿ ದೊರಕಿಸಿಕೊಡಲಾಗಿದೆ. ಆದರೆ ಕುಟುಂಬದವರೂ ಕ್ರಿಕೆಟಿಗರಂತೇ ಕಡ್ಡಾಯ ಕ್ವಾರಂಟೈನ್ ಅವಧಿಯಲ್ಲಿ ಕಾಲ ಕಳೆಯಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ