ಕೆಎಲ್ ರಾಹುಲ್ ಮದುವೆಗೆ ಗೈರಾದ ಟೀಂ ಇಂಡಿಯಾ ಸ್ನೇಹಿತರು

ಮಂಗಳವಾರ, 24 ಜನವರಿ 2023 (08:50 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ಬಹುಕಾಲದ ಗೆಳತಿ ಅಥಿಯಾ ಶೆಟ್ಟಿಯನ್ನು ವರಿಸಿದ್ದಾರೆ. ಮುಂಬೈನಲ್ಲಿ ವಿವಾಹ ಕಾರ್ಯಕ್ರಮ ನೆರವೇರಿದೆ.

ಬಳಿಕ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋ ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳು, ಫ್ಯಾನ್ಸ್ ನವ ಜೋಡಿಗೆ ಶುಭ ಹಾರೈಸಿದ್ದಾರೆ. ಮುಂಬೈನ ಖಂಡಾಲದಲ್ಲಿರುವ ಸುನಿಲ್ ಶೆಟ್ಟಿ ಫಾರ್ಮ್ ಹೌಸ್ ನಲ್ಲಿ ಮದುವೆ ಕಾರ್ಯಕ್ರಮಗಳು ನೆರವೇರಿತ್ತು.

ಮದುವೆಗೆ ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಸಿನಿಮಾ ಸೆಲೆಬ್ರಿಟಿಗಳು, ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಬಾಲಿವುಡ್ ಸ್ಟಾರ್ ನಟರು, ಟೀಂ ಇಂಡಿಯಾ ಕ್ರಿಕೆಟಿಗರು ಮದುವೆಗೆ ಗೈರಾಗಿದ್ದರು. ಕ್ರಿಕೆಟಿಗರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಇಂಧೋರ್ ನಲ್ಲಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಸ್ನೇಹಿತರು ಯಾರೂ ಮದುವೆಗೆ ಹಾಜರಾಗಲಿಲ್ಲ. ಆದರೆ ಕ್ರಿಕೆಟಿಗ ಇಶಾಂತ್ ಶರ್ಮಾ, ವರುಣ್ ಏರನ್ ಮದುವೆಗೆ ಆಗಮಿಸಿದ್ದರು. ಉಳಿದಂತೆ ಟೀಂ ಇಂಡಿಯಾ ಕ್ರಿಕೆಟಿಗರು ಸೋಷಿಯಲ್ ಮೀಡಿಯಾ ಮೂಲಕ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ