ಭಾರತ-ಲಂಕಾ ಏಕದಿನ: ನಿಧಾನವೇ ಪ್ರಧಾನವೆಂದ ಕೆಎಲ್ ರಾಹುಲ್ ಗೆ ಬಹುಪರಾಕ್!
ಲಂಕಾ ನೀಡಿದ್ದ 216 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಗೆದ್ದಿದ್ದು ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಜವಾಬ್ಧಾರಿಯುತ ಆಟದಿಂದ. ಕೊಹ್ಲಿ, ರೋಹಿತ್, ಶುಬ್ನಂ ಗಿಲ್ ಬೇಗನೇ ಔಟಾದಾಗ ಭಾರತ ಸಂಕಷ್ಟದಲ್ಲಿತ್ತು.
ಈ ವೇಳೆ ಭಾರತಕ್ಕೆ ಜೊತೆಯಾಟವೊಂದು ಬೇಕಿತ್ತು. ಈ ವೇಳೆ ಜೊತೆಯಾಗಿದ್ದ ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ. ರಾಹುಲ್ 103 ಎಸೆತ ಎದುರಿಸಿ 64 ರನ್ ಗಳಿಸಿದರು. ನಿಧಾನಗತಿಯ ಇನಿಂಗ್ಸ್ ಗೆ ಇಷ್ಟು ದಿನ ಟೀಕೆಗೊಳಗಾಗುತ್ತಿದ್ದ ರಾಹುಲ್ ಇಂದು ಹೊಗಳಿಸಿಕೊಂಡರು. ಪಾಂಡ್ಯ ಕೂಡಾ ತಮ್ಮ ನ್ಯಾಚುರಲ್ ಗೇಮ್ ಗೆ ವಿರುದ್ಧವಾಗಿ 53 ಎಸೆತ ಎದುರಿಸಿ 36 ರನ್ ಗಳಿಸಿದರು. ಅಂತಿಮವಾಗಿ 43.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿ ಗೆಲುವಿನ ನಗೆ ಬೀರಿತು.