ಕೆಎಲ್ ರಾಹುಲ್, ಅಥಿಯಾ ಮದುವೆಗೆ ಬರುವವರಿಗೆ ಷರತ್ತು ಅನ್ವಯ!

ಭಾನುವಾರ, 22 ಜನವರಿ 2023 (09:10 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಜನವರಿ 23 ರಂದು ಮುಂಬೈನ ಖಂಡಾಲ ಬಂಗಲೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮದುವೆಗಾಗಿ ಇಬ್ಬರ ಮನೆಯಲ್ಲಿ ತಯಾರಿ ಜೋರಾಗಿಯೇ ನಡೆದಿದೆ. ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಇನ್ನು ರಾಹುಲ್ ಮದುವೆ ರಿಸೆಪ್ಷನ್ ಐಪಿಎಲ್ 2023 ರ ಬಳಿಕ ನಡೆಯಲಿದೆ ಎನ್ನಲಾಗಿದೆ. ಸದ್ಯಕ್ಕೆ ರಾಹುಲ್ ಕ್ರಿಕೆಟ್ ನಲ್ಲಿ ಬ್ಯುಸಿಯಾಗಿರುವುದರಿಂದ ರಿಸೆಪ್ಷನ್ ತಡವಾಗಿ ನಡೆಯಲಿದೆ ಎನ್ನಲಾಗಿದೆ.

ಇದೀಗ ಸುನಿಲ್ ಶೆಟ್ಟಿಯವರ ಬಂಗಲೆಯಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದ್ದು, ಮದುವೆಗೆ ಆಗಮಿಸುವವರು ಫೋನ್ ಬಳಕೆ ಮಾಡದಂತೆ ನಿರ್ಬಂಧ ಹೇರಲಾಗಿದೆ. ಮದುವೆ ತೀರಾ ಖಾಸಗಿಯಾಗಿ ನಡೆಯಲಿದ್ದು, ಸಲ್ಮಾನ್ ಖಾನ್, ಜಾಕಿ ಶ್ರಾಫ್, ವಿರಾಟ್ ಕೊಹ್ಲಿ ಸೇರಿದಂತೆ ಕೆಲವೇ ಆಪ್ತರಿಗೆ ಮಾತ್ರ ಮದುವೆ ಆಮಂತ್ರಣ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ