ಆಸ್ಟ್ರೇಲಿಯಾ ಸರಣಿಗೆ ಮೊದಲು ಮರೆಯಾಯಿತು ಟೀಂ ಇಂಡಿಯಾದ ದೊಡ್ಡ ಚಿಂತೆ!
ಕಳೆದ ಕೆಲವು ದಿನಗಳಿಂದ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಆರಂಭಿಕ ಶಿಖರ್ ಧವನ್ ವಿಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭರ್ಜರಿ ಫಾರ್ಮ್ ಗೆ ಮರಳಿರುವುದರಿಂದ ಆ ಚಿಂತೆಯೇನೋ ಮರೆಯಾಗಿದೆ.
ಆದರೆ ಕೆಎಲ್ ರಾಹುಲ್ ಇನ್ನೂ ಫಾರ್ಮ್ ಕಂಡುಕೊಳ್ಳದೇ ಇರುವುದು ಸಮಸ್ಯೆಯಾಗಿದೆ. ಆಸ್ಟ್ರೇಲಿಯಾ ಸರಣಿಗೆ ವಿರಾಟ್ ಕೊಹ್ಲಿ ತಂಡಕ್ಕೆ ಮರಳುತ್ತಾರೆ. ಹೀಗಾಗಿ ಇನ್ನೂ ಫಾರ್ಮ್ ಕಂಡುಕೊಳ್ಳದ ರಾಹುಲ್ ತಂಡದಿಂದ ಹೊರಗುಳಿಯಬೇಕಾಗಬಹುದು. ಅತ್ತ ದಿನೇಶ್ ಕಾರ್ತಿಕ್, ರಿಷಬ್ ಪಂತ್ ಒಂದೊಂದು ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಿರುವುದರಿಂದ ಮಧ್ಯಮ ಕ್ರಮಾಂಕದ ಚಿಂತೆ ಮರೆಯಾಗಿದೆ. ಆದರೆ ಇದು ತವರಿಗೆ ಮಾತ್ರ ಸೀಮಿತವಾಗದೇ ಆಸ್ಟ್ರೇಲಿಯಾದಲ್ಲೂ ಇದೇ ಮ್ಯಾಜಿಕ್ ನಡೆದರೆ ಮಾತ್ರ ಟೀಂ ಇಂಡಿಯಾಕ್ಕೆ ಗೆಲುವು ಸಾಧ‍್ಯ.