ಟೀಂ ಇಂಡಿಯಾ ಕ್ರಿಕೆಟಿಗರಿಗೆ ಬಯೋಬಬಲ್ ನಿಂದ ಕೊನೆಗೂ ಮುಕ್ತಿ

ಸೋಮವಾರ, 30 ಮೇ 2022 (11:03 IST)
ಮುಂಬೈ: ಇಷ್ಟು ದಿನ ಬಯೋಬಬಲ್ ವಾತಾವರಣದಿಂದಾಗಿ ಕ್ರಿಕೆಟಿಗರು ಮಾನಸಿಕವಾಗಿ ಕುಗ್ಗಿ ಹೋಗುವುದಾಗಿ ದೂರುತ್ತಲೇ ಇದ್ದರು. ಆದರೆ ಈಗ ಕೊರೋನಾ ಪ್ರಕರಣಗಳು ಕಡಿಮೆಯಾಗಿರುವ ಹಿನ್ನಲೆಯಲ್ಲಿ ಆಟಗಾರರಿಗೆ ಬಯೋಬಬಲ್ ನಿಂದ ಮುಕ್ತಿ ಸಿಗಲಿದೆ.

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಮುಂಬರುವ ಎಲ್ಲಾ ಸರಣಿಗಳಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಬಯೋ ಬಬಲ್ ನಲ್ಲಿರಬೇಕಾಗಿಲ್ಲ.

ಕಡ್ಡಾಯ ನಿಯಮವನ್ನು ಹಿಂತೆಗೆಯಲಾಗಿದ್ದು, ಆಟಗಾರರು ಮುಕ್ತವಾಗಿ ಇರಬಹುದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ