ದ.ಆಫ್ರಿಕಾ ಸರಣಿಗೆ ಮೊದಲು ಟೀಂ ಇಂಡಿಯಾ ಕ್ರಿಕೆಟಿಗರಿಗೆ ಎನ್ ಸಿಎನಲ್ಲಿ ಗ್ರಿಲ್
ಎಲ್ಲಾ ಕ್ರಿಕೆಟಿಗರು ಈಗ ಐಪಿಎಲ್ ಆಡುತ್ತಿದ್ದು, ರಾಷ್ಟ್ರೀಯ ತಂಡಕ್ಕೆ ಸೇರುವ ಮೊದಲು ಎಲ್ಲರೂ ಎನ್ ಸಿಎಗೆ ಬಂದು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾಗಬೇಕು. ಆದರೆ ಹರ್ಷಲ್ ಪಟೇಲ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಕೆಲವರಿಗೆ ಸಣ್ಣ ಪುಟ್ಟ ಗಾಯದ ಸಮಸ್ಯೆಯಿದೆ.
ಹೀಗಾಗಿ ರಾಷ್ಟ್ರೀಯ ತಂಡಕ್ಕೆ ಸೇರುವ ಮುನ್ನ ಎಲ್ಲಾ ಆಟಗಾರರು ಬೆಂಗಳೂರಿನ ಎನ್ ಸಿಎನಲ್ಲಿ ಜೂನ್ 5 ರಂದು ಸೇರಲಿದ್ದು, ಇಲ್ಲಿ ಫಿಟ್ನೆಸ್ ಸಾಬೀತುಪಡಿಸಿದ ಬಳಿಕ ದೆಹಲಿಗೆ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲು ತೆರಳಲಿದ್ದಾರೆ.